22.6 C
ಪುತ್ತೂರು, ಬೆಳ್ತಂಗಡಿ
September 16, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ಅಳದಂಗಡಿ ಸೊಸೈಟಿಯಿಂದ ಕಾಳುಮೆಣಸು ಮತ್ತು ಕಾಫಿ ಬೆಳೆಯ ಕೃಷಿ ಮಾಹಿತಿ ಹಾಗೂ ಸಂವಾದ: ಸುವರ್ಣ ಸಂಭ್ರಮ-2026 ಚಾಲನೆ,ಕೃಷಿ ತರಬೇತುದಾರರಿಗೆ ಸನ್ಮಾನ,ಸಾಧಕ ಕೃಷಿಕರಿಗೆ ಗೌರವಾರ್ಪಣೆ: ದ.ಕ. ಜಿಲ್ಲೆಯ ಕೃಷಿಕರು ಚಂಚಲ ಮನಸ್ಥಿತಿಯವರು: ಶಾಸಕ ಹರೀಶ್ ಪೂಂಜ

ಅಳದಂಗಡಿ: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಸುವರ್ಣ ಸಂಭ್ರಮ 2026 ಚಾಲನೆಯೊಂದಿಗೆ ಕಾಳುಮೆಣಸು ಮತ್ತು ಕಾಫಿ ಬೆಳೆಯ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ ಮಾ.15ರಂದು ಅಳದಂಗಡಿ ಕಟ್ಟೂರು ಶಂಕರ್ ಭಟ್ ರವರ ತೋಟದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್‌ ಪೂಂಜರವರು ನೆರವೇರಿಸಿ ಮಾತನಾಡಿ ಧಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಚಂಚಲ ಮನಸ್ಥಿತಿಯವರು. ಯಾಕೆಂದರೆ ಭತ್ತ ಬೆಳೆದು ಬೆಲೆ ಕಡಿಮೆಯಾದಾಗ ಅಡಿಕೆ ಹಾಕಿದೆವು, ನಂತರ ಅಡಿಕೆ ಕಡಿದು ರಬ್ಬರು ಬೆಳೆದೆವು,ಹೀಗೆ ವೆನಿಲ್ಲಾ,ಕೋಕಾ,ಇನ್ನಿತರ ಬೆಳೆ ಬೆಳೆಯುತ್ತ ಇದ್ದೇವೆ. ಇದರಿಂದ ಕೃಷಿಕರು ಆರ್ಥಿಕವಾಗಿ ನಷ್ಟ ಅನುಭವಿದುವಂತಾಗುತ್ತದೆ. ಅಳದಂಗಡಿ ಸೊಸೈಟಿ ಕೃಷಿಕರಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಅವರು ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಕುಶಾಲಪ್ಪ ಗೌಡ ಸುವರ್ಣ ಸಂಭ್ರಮದ ಲೋಗೊ ಅನಾವರಣಗೊಳಿಸಿದರು.ಮುಖ್ಯ ಅತಿಥಿಗಳಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ., ಪ್ರಗತಿಪರ ಕೃಷಿಕ ಶಂಕರ ಭಟ್‌ ಕಟ್ಟೂರು ಭಾಗವಹಿಸಿದರು.ಐ.ಸಿ.ಎ.ಆರ್ ನಿವೃತ್ತ ಹಿರಿಯ ವಿಜ್ಞಾನಿ ಡಾ. ವೇಣುಗೋಪಾಲ್ ಕಾಳುಮೆಣಸು ನಾಟಿ, ಪೋಷಣೆ, ರೋಗ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು‌. ದ.ಕ. ಜಿಲ್ಲಾ ಕಾಳುಮೆಣಸು ಹಾಗೂ ಕಾಫಿ ಬೆಳೆಗಾರ ಅಜಿತ್‌ ಪ್ರಸಾದ್ ರೈ ಕಾಯರ್ತಡಿ ದ.ಕ. ಜಿಲ್ಲೆಯಲ್ಲಿ ಅಡಿಕೆಗೆ ಪರ್ಯಾಯ ಹಾಗೂ ಮಿಶ್ರ ಬೆಳೆಯಾಗಿ ಲಾಭಾದಾಯಕ ಕಾಫಿ ಕೃಷಿ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿಪರ ಕೃಷಿಕ ಅನಂತಕೃಷ್ಣ ಪಳ್ಳತ್ತಡ್ಕ ನೀರಾವರಿ, ಆಟೋಮೇಟಿಕ್ ಇರಿಗೇಷನ್ ಮತ್ತು ಫಟಿಗೇಷನ್ ಸಿಸ್ಟಂ ಬಗ್ಗೆ ತಿಳಿಸಿದರು.ಆಡಳಿತ ಮಂಡಳಿಯ ಉಪಾಧ್ಯಕ್ಷ ಜನಾರ್ಧನ,ಸಿಇಓ ಮೀರಾ, ನಿರ್ದೇಶಕರಾದ ಗುರುಪ್ರಸಾದ್ ಹೆಗ್ಡೆ,ವಿಶ್ವನಾಥ ಹೊಳ್ಳ,ಹೇಮಂತ್,ಕೊರಗಪ್ಪ,ದೇವಿಪ್ರಸಾಸ್ ಶೆಟ್ಟಿ, ದಿನೇಶ್ ಪಿ.ಕೆ,ದೇಜಪ್ಪ ಪೂಜಾರಿ,ಧರ್ಣಪ್ಪ,ಸುಂದರಿ,ಮಮತಾ,ವಲಯ ಮೇಲ್ವಿಚಾರಕ ಸುದರ್ಶನ್ ಉಪಸ್ಥಿತರಿದ್ದರು.ವಿಜಯ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.ಅಕ್ಷರ್ ಕೀರ್ತಿ ಪ್ರಾರ್ಥನೆಗೈದರು.

ಬಾಕ್ಸ್ರೈತರಿಗೆ ಪ್ರಯೋಜನ:ರಾಕೇಶ್ ಹೆಗ್ಡೆಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಕಳೆದ ವರ್ಷ ಕೃಷಿಕರಿಗೆ ಪ್ರಯೋಜನವಾಗಲಿ ಎಂಬ ಸದುದ್ದೇಶದಿಂದ ಕಾಳುಮೆಣಸು ಮತ್ತು ಜಾಯಿಕಾಯಿ ಬೆಳೆಯ ಬಗ್ಗೆ ರೈತರಿಗೆ ತಿಳಿಸಿ,ಗಿಡ ವಿತರಿಸುವ ಕೆಲಸ ಮಾಡಲಾಗಿದೆ. ಈ ಬಾರಿ ಕಾಳು ಮೆಣಸು ಜೊತೆಗೆ ಕಾಫಿ ಬೆಳೆಯ ಬಗ್ಗೆ ಇಲ್ಲಿನ ಕೃಷಿಕರಿಗೆ ತಿಳಿಸುವ ಪ್ರಯತ್ನ ನಮ್ಮದಾಗಿದೆ.ವಿಶೇಷವಾಗಿ ಅಳದಂಗಡಿ ಸೊಸೈಟಿಯು 50ವರ್ಷದ ಸಂಭ್ರಮದಲ್ಲಿದ್ದು ಸುವರ್ಣ ಸಂಭ್ರಮಕ್ಕೆ ಚಾಲನೆ ಕೂಡ ನೀಡಲಾಗಿದೆ ಎಂದು ಅಳದಂಗಡಿ ಸಿಎ ಬ್ಯಾಂಕ್ ಅದ್ಯಕ್ಷ ರಾಕೇಶ್ ಹೆಗ್ಡೆ ತಿಳಿಸಿದ್ದಾರೆ.

Related posts

ಲಾಯಿಲ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಕಂಡೊದ ಕಲೊಟ್ಟು ಬಿರುವೆರೆ ಗೊಬ್ಬು

Suddi Udaya

ಬೆಳ್ತಂಗಡಿ:ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ ಸಾವು

Suddi Udaya

ಜೆಸಿಐ ಮಡಂತ್ಯಾರಿನಿಂದ “ಪ್ರಯಾಸ್ ಡೇ” ಮತ್ತು “ವಿಶ್ವ ಪರಿಸರ ದಿನ ಆಚರಣೆ”

Suddi Udaya

ಗುರಿಪಳ್ಳ ಅಂಬಡಬೆಟ್ಟು ತಾತ್ಕಾಲಿಕ ಸೇತುವೆ ಪುನರ್ ನಿರ್ಮಿಸಿ ಜನರ ಕಷ್ಟಕ್ಕೆ ಸ್ಪಂದಿಸಿದ ಪ್ರವೀಣ್ ಫೆರ್ನಾಂಡೀಸ್ ಹಳ್ಳಿಮನೆ

Suddi Udaya

ಉಜಿರೆ ಬೆನಕ ಹೆಲ್ತ್ ಸೆಂಟರ್ ನ ಡಾ. ಗೋಪಾಲಕೃಷ್ಣ ಕೆ ಅವರಿಗೆ “ಆಯುಷ್ ಶ್ರೀ” ಪ್ರಶಸ್ತಿ

Suddi Udaya

ಡಿ.13ರಂದು ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!