September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಪೌರ ಕಾರ್ಮಿಕರಿಗೆ ನ್ಯಾಯಯುತ ವೇತನ, ಪಿ.ಎಫ್., ಇಎಸ್ ಐ ,ಹೆಲ್ತ್ ಕಾರ್ಡ್ ಒದಗಿಸಬೇಕು :ಪೌರ ಕಾರ್ಮಿಕ ಮುಖಂಡ ಎಸ್ .ಪಿ. ಆನಂದ್ ಒತ್ತಾಯ

ಬೆಳ್ತಂಗಡಿ : ಏಪ್ರಿಲ್ ತಿಂಗಳಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸಫಾಯಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಸ್ವಾಮಿ ಅವರನ್ನು ನಿಯೋಗ ಭೇಟಿ ಮಾಡಿ ದ.ಕ. ಜಿಲ್ಲೆಯ 251 ಗ್ರಾಮಪಂಚಾಯತ್ ಗಳಲ್ಲಿ
ದುಡಿಯುತ್ತಿರುವ ಪೌರ ಕಾರ್ಮಿಕರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಮುಖ ಬೇಡಿಕೆಗಳನ್ನು, ಮುಂದಿಡಲಿದ್ದೇವೆ ಎಂದು ದಲಿತ ಮುಖಂಡ, ದಕ ಜಿಲ್ಲಾ ಪೌರ ಕಾರ್ಮಿಕರ ಸಂಘದ ಕಾರ್ಯದರ್ಶಿ ಎಸ್ .ಪಿ. ಆನಂದ್ ತಿಳಿಸಿದರು.

ಅವರು ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾ ಪಂ ವ್ಯಾಪ್ತಿಯ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿ ಇಲ್ಲಿನ ಸ್ವಚ್ಛತಾ ಕಾರ್ಮಿಕರ ಕುಂದು‌ಕೊರತೆಗಳ ಮಾಹಿತಿ ಪಡೆದು ಮಾತನಾಡಿದರು.
ಪ.ಪಂ ಗ್ರಾ ಪಂ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಅಥವಾ ಸ್ವಚ್ಛತಾ ಕಾರ್ಮಿಕರಿಗಾಗಿ ಸಂಬಂಧಪಟ್ಟ ಸ್ಥಳೀಯ ಆಡಳಿತಗಳು ಒದಗಿಸಬೇಕಾದ ಮೂಲಭೂತ ಸೌಲಭ್ಯಗಳಾದ ನ್ಯಾಯಯುತ ವೇತನ
ಇಎಸ್ ಐ, ಪಿ.ಎಫ್. ಆರೋಗ್ಯ ಕಾರ್ಡ್ ಆರೋಗ್ಯ ಸೌಲಭ್ಯ, ಆರೋಗ್ಯ ತಪಾಸಣೆ, ಕೆಲಸದ ಸ್ಥಳಗಳಲ್ಲಿ ಶೌಚಾಲಯ ಸಹಿತ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.


ಪೌರ ಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿಗಳು ಕೆಲಸದ ಅವಧಿಯಲ್ಲಿ ಮಾಸ್ಕ್, ಗ್ಲೌಸ್ ಇತ್ಯಾದಿ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಸಲಹೆ ನೀಡಿದರು. ಪೌರ ಕಾರ್ಮಿಕರನ್ನು
ಗುತ್ತಿಗೆ ಆಧಾರದ ನೇಮಕಾತಿ ರದ್ದುಗೊಳಿಸಿ ಸ್ಥಳೀಯಾಡಳಿತಗಳಲ್ಲಿ‌ ನೇರವಾಗಿ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದು ಪೌರ ಕಾರ್ಮಿಕರು ಯಾವುದೇ ಗುಲಾಮಗಿರಿಗೆ ಬಲಿಯಾಗದಂತೆ ಎಚ್ವರವಹಿಸಬೇಕು, ಪೌರ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಿ ಕನಿಷ್ಠ ವೇತನ ವ್ಯಾಪ್ತಿಗೊಳಪಡಿಸಿ
ಅತಂತ್ರ ಸ್ಥಿತಿಯಿಂದ ಮುಕ್ತಗೊಳಿಸಬೇಕು. ಯಾವುದೇ ಗ್ರಾಮಪಂಚಾಯತ್ ಗಳಲ್ಲಿ
ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ವಿನಾಕಾರಣ ಪೌರ ಕಾರ್ಮಿಕರಿಗೆ ಕೆಲಸದಿಂದ ತೆಗೆಯುವ ಬೆದರಿಕೆಯೊಡ್ಡಿ ಮಾನಸಿಕ ಕಿರುಕುಳ ನೀಡಿದಲ್ಲಿ ಇದರ ವಿರುದ್ಧ ಹೋರಾಟ ನಡೆಸುವುದಾಗಿ ಎಸ್ ಪಿ ಆನಂದ್ ಎಚ್ಚರಿಕೆ ನೀಡಿದರು.


ಪೌರ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಎಸ್ ಪಿ ಆನಂದ್
ಡಂಪಿಂಗ್ ಯಾರ್ಡ್ ಗಳಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರು, ಮಾಸ್ಕ್ , ಗ್ಲೌಸ್ ಧರಿಸಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಮುನ್ನೆಚ್ಚರಿಕೆವಹಿಸಬೇಕು, ಅಲರ್ಜಿ ,ಚರ್ಮರೋಗ ಅಥವಾ ಕುಷ್ಠರೋಗದಂಥ ಸಾಂಕ್ರಾಮಿಕ ರೋಗಗಳ ಅಪಾಯವಿರುವುದರಿಂದ ಕೆಲಸದ ಸ್ಥಳದಿಂದ ಸ್ನಾನ ಮಾಡಿಕೊಂಡು ಮನೆಗೆ ತೆರಳಬೇಕು ಎಂದು ಮಾಹಿತಿ ನೀಡಿದರು.
ಪೌರ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಪ್ರಮುಖ ಬೇಡಿಕೆಗಳ
ಮನವಿ ಕೊಟ್ಟ ಬಳಿಕ‌ ವೇತನದಲ್ಲಿ ಸಣ್ಣ ಮಟ್ಟಿನಲ್ಲಿ ಏರಿಕೆಯಾಗಿರುವ ಬಗ್ಗೆ ಎಂದು ತಿಳಿಸಿದರು.
ಪೌರ ಕಾರ್ಮಿಕರು ಸಂಘಟಿತರಾಗಿ ಹೋರಾಟ ರೂಪಿಸಿದಲ್ಲಿ ಮಾತ್ರ ಕುಂದು ಕೊರತೆಗಳನ್ನು ಬಗೆಹರಿಸಿಕೊಂಡು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದು ಕರೆ ನೀಡಿದರು.


ಈ ಸಂದರ್ಭ ನಿಯೋಗವು ಲಾಯಿಲಾ ಗ್ರಾಮಪಂಚಾಯತ್ ಗೆ ಭೇಟಿ ನೀಡಿ ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು‌ ಚರ್ಚಿಸಿದ್ದು
ಪಿಎಫ್, ಇಎಸ್ಐ, ಹೆಲ್ತ್ ಕಾರ್ಡ್,ಆರೋಗ್ಯ ತಪಾಸಣೆ, ಸುರಕ್ಷತಾ ಪರಿಕರಗಳೂ ಸೇರಿದಂತೆ ಸೌಲಭ್ಯಗಳು ವಿಳಂಬವಾಗಿದ್ದಲ್ಲಿ‌ ಕೂಡಲೇ ಒದಗಿಸಬೇಕೆಂದು ಒತ್ತಾಯಿಸಿದೆ. ಈ ಸಂದರ್ಭ ಬೆಳ್ತಂಗಡಿ ತಾಲೂಕು ಪೌರಕಾರ್ಮಿಕರ ಸಂಘದ
ಅಧ್ಯಕ್ಷ ಸುರೇಶ್ ಸುದೆಮುಗೇರು, ಸದಸ್ಯ, ಪ.ಪಂ ವಾಹನ ಚಾಲಕ ಶಿವಕುಮಾರ್ ಮತ್ತಿತರ ಸದಸ್ಯರು ಇದ್ದರು.

Related posts

ಭಾರತೀಯ ಸೇನೆಗೆ ಆಯ್ಕೆಯಾದ ಮಿತ್ತಬಾಗಿಲು ಪುನೀತ್ ಕುಮಾರ್ ರಿಗೆ ಪಂಚಶ್ರೀ ಹಾರ್ಡ್ವೇರ್ ವತಿಯಿಂದ ಸನ್ಮಾನ

Suddi Udaya

ಉರುವಾಲು :32 ನೇ‌ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ಕರುಂ ಬಿತ್ತಿಲು ಸಂಗೀತ ಶಿಬಿರ ಸಮಾರೋಪ

Suddi Udaya

ರುಡ್ ಸೆಟ್ ಸಂಸ್ಥೆಯಲ್ಲಿ ಟಿ.ವಿ. ಟೆಕ್ನಿಷಿಯನ್ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಗುರುವಾಯನಕೆರೆ ಕೆರೆ ಬಳಿ ಸೃಷ್ಟಿಯಾದ ಇನ್ನೊಂದು ಕೆರೆ, ರಾಜ್ಯ ಹೆದ್ದಾರಿಯಲ್ಲಿ ಮರಣ ಗುಂಡಿಗಳು, ವಾಹನ ಚಾಲಕರಿಗೆ ಹಾಗೂ ಪಾದಚಾರಿಗಳಿಗೆ ತೀವ್ರ ಸಂಕಷ್ಟ,

Suddi Udaya

ನ್ಯಾಯವಾದಿ ಮುರಳೀಧರ ಬಲಿಪ ನೇತೃತ್ವದ ಬಲಿಪ ರೆಸಾರ್ಟ್ ವತಿಯಿಂದ 9 ಸರಕಾರಿ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya
error: Content is protected !!