September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶುಭಾರಂಭ

ಬೆಳ್ತಂಗಡಿ ಸುವರ್ಣ ಆರ್ಕೆಡ್ ಕಟ್ಟಡದಲ್ಲಿ “ಹೊಟೇಲ್ ಸಮಡೈನ್” ಉದ್ಘಾಟನೆ

ಬೆಳ್ತಂಗಡಿ: ಕಳೆದ 35 ವರ್ಷಗಳಿಂದ ಬೆಳ್ತಂಗಡಿ ನಗರದಲ್ಲಿ ಕಾರ್ಯಾಚರಿಸುತ್ತಿದ್ದ “ಸಮಡೈನ್” ಸಂಸ್ಥೆಯ ನೂತನ ಹೊಟೇಲ್ ಏ.9 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.

ಪೂರ್ವಾಹ್ನ ಧಾರ್ಮಿಕ ಕಾರ್ಯಕ್ರಮಗಳು ನಡೆದು ಸಯ್ಯಿದ್ ಎಸ್.ಎಂ ಕೋಯ ತಂಙಳ್ ಶುಭಾಶೀರ್ವಾದ ನೀಡಿದರು.
ಈ ವೇಳೆ ಹನೀಫ್ ಮುಸ್ಲಿಯಾರ್ ನಿಡಿಗಲ್, ಮುಹ್ಯುದ್ದೀನ್‌ ಉಜಿರೆ, ಯು. ಹೈದರ್ ಮದನಿ ಉಜಿರೆ, ಇಸ್ಮಾಯಿಲ್ ಸಖಾಫಿ ಡಿ.ಹೆಚ್ ಮಾಚಾರ್, ಹನೀಫ್ ಫೈಝಿ ಬೆಳ್ತಂಗಡಿ, ಮುಹಮ್ಮದ್ ನೌಶಾದ್ ಸಖಾಫಿ‌ ಮಲೆಬೆಟ್ಟು, ಸಿದ್ದೀಕ್‌ ಮದನಿ, ಫಾರೂಕ್‌ ಮದನಿ‌ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.

ಬಳಿಕ‌ ಸುವರ್ಣ ಆರ್ಕೆಡ್ ಮಾಲಕ ನಾಣ್ಯಪ್ಪ ಪೂಜಾರಿ ರಿಬ್ಬನ್‌ ಕತ್ತರಿಸಿ ನೂತನ ಹೊಟೇಲ್ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭ ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೋ, ಇಬ್ರಾಹಿಂ ಸಖಾಫಿ‌ ಕಬಕ, ಸಾದಿಕ್‌ ಮಾಸ್ಡರ್ ಮಲೆಬೆಟ್ಟು, ಅನ್ವರ್ ಅಲಿ ಬೆಳ್ತಂಗಡಿ, ಸಿರಾಜ್ ಜೈಭಾರತ್ ಪುತ್ರಬೈಲು, ಅಶ್ರಫ್ ಆಲಿಕುಂಞಿ ಮುಂಡಾಜೆ, ಎನ್ ಉಸ್ಮಾನ್ ಪಣಕಜೆ, ಹೈದರ್ ಇಸ್ಮಾಯಿಲ್ ಮಲೆಬೆಟ್ಟು, ಪ್ರವೀಣ್ ಭಂಡಾರಿ ಬೆಳ್ತಂಗಡಿ, ಅನ್ಸಾರ್ ಮಲೆಬೆಟ್ಟು, ಹರೀಶ್ ಲಾಯಿಲ ಆದರ್ಶನಗರ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಿಕ ಅಬೂಬಕ್ಕರ್, ಅವರ ತಂದೆ ಹಮೀದ್ ಮಲೆಬೆಟ್ಟು, ಮಕ್ಕಳಾದ ಫಝಲ್, ಮುಝಮ್ಮಿಲ್, ರಸಿಲ್ ಇವರು ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು.

Related posts

ಕಲ್ಮಂಜ : ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಪಜಿರಡ್ಕ ದೇವಸ್ಥಾನದಲ್ಲಿ ಶ್ರಮದಾನ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆ

Suddi Udaya

ಫೆ.18: ಕೊಕ್ಕಡ ಕೇಸರಿ ಗೆಳೆಯರ ಬಳಗದ ಆಶ್ರಯದಲ್ಲಿ ಕ್ರಿಕೆಟ್ ಪಂದ್ಯಾಟ ಹಾಗೂ ಅಯೋಧ್ಯ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ

Suddi Udaya

ಜೆಸಿಐ ವಲಯ-15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಜೆಸಿ ಜಯೇಶ್ ಬರೆಟ್ಟೊ ರವರಿಗೆ ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”

Suddi Udaya

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶ್ರೀಮತಿ ತಾರಾಕೇಸರಿ ನೇಮಕ

Suddi Udaya
error: Content is protected !!