September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಸಂಘ-ಸಂಸ್ಥೆಗಳು

ಡಿವೈಎಫ್ಐ ಯಿಂದ ಹಳ್ಳಿಂಗೇರಿ ಸರಕಾರಿ ಶಾಲಾ ಬಾವಿಯ ಸ್ವಚ್ಚತಾ ಶ್ರಮದಾನ

ಕೊಕ್ಕಡ: ಹಳ್ಳಿಂಗೇರಿ ಸರಕಾರಿ ಶಾಲಾ ಬಾವಿಯು ಬಲ್ಲೆ ಹಾಗೂ ಕೆಸರಿನಿಂದ ತುಂಬಿದ್ದು , ಸ್ವಚ್ಚಗೊಳಿಸಿಕೊಡುವ ಬಗ್ಗೆ ಶಾಲಾ ಮುಖ್ಯಶಿಕ್ಷಕ ಶ್ರೀಧರ ಕೆ ಎಸ್ ಅವರ ವಿನಂತಿಯ ಮೇರೆಗೆ ಎ.5ರಂದು ಕೊಕ್ಕಡದ ಡಿವೈಎಫ್ಐ ತಂಡ ಶ್ರಮದಾನದ ಮೂಲಕ ಬಾವಿಯನ್ನು ಸ್ವಚ್ಚಗೊಳಿಸಿಕೊಟ್ಟಿರುತ್ತಾರೆ.‌

ಅಗತ್ಯ ಪರಿಕರಗಳನ್ನು ಬಾಬು ಮರುವಂತಿಲ, ಚಂದ್ರಶೇಖರ ಗೌಡ ಅನಾರು ಒದಗಿಸಿದ್ದರು. ಶ್ರಮದಾನಿಗಳಾಗಿ ಬಾಬು ಮರುವಂತಿಲ, ಬಾಬು ಬಾಂತಿಮಾರು, ಮಾಧವ ಅಡ್ಯೈ, ಗುರುಪ್ರಸಾದ್ ಅಡ್ಯೈ, ರಾಘವ ಅಡ್ಯೈ ಕಾರ್ಯನಿರ್ವಹಿಸಿ ಬಾವಿ ಸ್ವಚ್ಚಗೊಳಿಸಿಕೊಟ್ಟರು.

ಇನ್ಸ್ಪೈರ್ ಸ್ಪೋರ್ಟ್ಸ್ ಕ್ಲಬ್ ಕೊಕ್ಕಡ ಇವರು ಶ್ರಮದಾನಿಗಳಿಗೆ ತಂಪು ಪಾನೀಯ, ಐಸ್ ಕ್ರೀಂ ಒದಗಿಸಿದರು. ಶ್ರೀಧರ್ ಕೆ ಎಸ್ ಉಪಾಹಾರವ‌ನ್ನು ಒದಗಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಶ್ರೀಧರ್ ಕೆ ಎಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನವಾಜ್ ಎನ್.ಎಸ್, ಮಾಜಿ ಅಧ್ಯಕ್ಷ ಉಮ್ಮರ್ ಬೈಲಂಗಡಿ, ಶ್ಯಾಮರಾಜ್ ಪಟ್ರಮೆ, ಅನ್ಸಾರ್ ಹಳ್ಳಿಂಗೇರಿ ಮೊದಲಾದವರು ಉಪಸ್ಥಿತರಿದ್ದು ಸಹಕಾರ ನೀಡಿದರು.

Related posts

ಉಜಿರೆ: ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ:

Suddi Udaya

ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ತೆನೆ ಹಬ್ಬ (ಮೊಂತಿ ಹಬ್ಬ)

Suddi Udaya

ಪಟ್ರಮೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಿತೇಶ್ ಎನ್ ಪುತ್ರನ್ ವರ್ಗಾವಣೆ: ಪಂಚಾಯತ್ ವತಿಯಿಂದ ಹಾಗೂ ಒಕ್ಕೂಟದಿಂದ ಬಿಳ್ಕೋಡುಗೆ ಸಮಾರಂಭ

Suddi Udaya

ಬೆಳ್ತಂಗಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಂ.ಆ‌ರ್. ಪ್ರಸನ್ನರಿಗೆ ಬೀಳ್ಕೊಡುಗೆ

Suddi Udaya

ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಶ್ರುತ ಆಳ್ವ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣ

Suddi Udaya

ಬೆಳ್ತಂಗಡಿ : ಮಾನಸಿಕ ಅಸ್ವಸ್ಥನನ್ನು ಸಿಯೋನ್ ಆಶ್ರಮಕ್ಕೆ ಸೇರಿಸಿದ ಬೆಳ್ತಂಗಡಿ ಪೊಲೀಸರು

Suddi Udaya
error: Content is protected !!