September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎ.19&20: ಬೆಳ್ತಂಗಡಿ ಶೃಂಗಾರ್ ಜುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಕೊಡುಗೆ

ಬೆಳ್ತಂಗಡಿ: ನಗರದ ಮುಖ್ಯರಸ್ತೆ ಸಮೀಪದ ಗೋಕುಲ್ ಆರ್ಕೇಡ್‌ನಲ್ಲಿ ಕಾರ್ಯಚರಿಸುತ್ತಿರುವ ಶೃಂಗಾರ್ ಜುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನಾಭರಣಗಳ ಮೇಲೆ ಎ.19 ಮತ್ತು 20ರಂದು ವಿಶೇಷ ಕೊಡುಗೆಗಳನ್ನು ನೀಡಲಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶೃಂಗಾರ್ ಜುವೆಲ್ಲರ್ಸ್ ನ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಂಬಿಕೆಗೆ ಇನ್ನೊಂದು ಹೆಸರು ಶೃಂಗಾರ್: ಬೆಳ್ತಂಗಡಿಯಲ್ಲಿ ಕಳೆದ ಎರಡೂವರೆ ದಶಕಗಳಿಂದ ಚಿನ್ನಾಭರಣ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿರುವ ಶೃಂಗಾರ್ ಜುವೆಲ್ಲರ್ಸ್ ಗೆ ಬೆಳ್ತಂಗಡಿ ತಾಲೂಕು ಮಾತ್ರವಲ್ಲದೇ ನೆರೆಯ ತಾಲೂಕುಗಳಿಂದ ಗ್ರಾಹಕರು ಚಿನ್ನಾಭರಣ ಕೊಳ್ಳಲು ಆಗಮಿಸುತ್ತಿರುವುದು ಇವರ ಚಿನ್ನದ ಗುಣಮಟ್ಟ ಹಾಗೂ ನಗುಮೊಗದ ಉತ್ತಮ ಸೇವೆಗೆ ಸಾಕ್ಷಿಯಾಗಿದೆ.

ಆಕರ್ಷಕ ವಿನ್ಯಾಸ: ಹೊಸ ವಿನ್ಯಾಸದ ಮದುವೆ ಆಭರಣಗಳ ಅಪೂರ್ವ ಸಂಗ್ರಹ, ಆಕರ್ಷಕ ವಿನ್ಯಾಸದ ವಿನೂತನ ಚಿನ್ನಾಭರಣಗಳು, ಬೆಳ್ಳಿಯ ಆಭರಣಗಳು, ದೇವತಾ ಪೂಜಾ ಸಾಮಗ್ರಿಗಳು, ಮನಮೋಹಕ ಒಡವೆಗಳು, ಮಕ್ಕಳಿಗೆ ಬೆಳ್ಳಿಯ ಆಭರಣಗಳು, ಉಡುಗೊರೆ ನೀಡಲು ಬೇಕಾದ ಚಿನ್ನ ಲೇಪಿತವಾದ ದೇವರ ಫೋಟೋಗಳು ಮಳಿಗೆಯಲ್ಲಿ ಲಭ್ಯವಿದ್ದು ಅಕ್ಷಯ ತೃತೀಯದ ಸಂದರ್ಭದಲ್ಲಿ ಶೃಂಗಾರ್ ಜುವೆಲ್ಲರ್ಸ್ ನಲ್ಲಿ ಆಯೋಜಿಸಿರುವ ಈ ವಿಶೇಷ ಆಫ‌ರ್ ಸಂದರ್ಭದಲ್ಲಿ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ತಮ್ಮ ಮನಗೊಪ್ಪುವ ಅತ್ಯಾಕರ್ಷಕ ವಿನ್ಯಾಸದ ಚಿನ್ನಾಭರಣಗಳನ್ನು ಖರೀದಿಸಬಹುದಾಗಿದೆ.

ವಿಶೇಷ ಕೊಡುಗೆಗಳು: ಅಕ್ಷಯ ತೃತೀಯದ ಪ್ರಯುಕ್ತ ಚಿನ್ನಾಭರಣ ಪ್ರಿಯರಿಗೆ ಶೃಂಗಾರ್ ಜುವೆಲ್ಲರ್ಸ್ ನಲ್ಲಿ ಪ್ರತೀ 1 ಗ್ರಾಂ ಚಿನ್ನಾಭರಣ ಖರೀದಿಯ ಮೇಲೆ 1 ಗ್ರಾಂ ಬೆಳ್ಳಿನಾಣ್ಯ ಉಚಿತವಾಗಿ ಪಡೆಯುವ ಅವಕಾಶವಿದೆ. ಎಲ್ಲಾ ಬೆಳ್ಳಿಯ ಆಭರಣ, ಪೂಜಾ ಸಾಮಾಗ್ರಿಗಳ ಖರೀದಿ ಮೇಲೆ 1 ಕೆಜಿಗೆ 5000 ರೂ. ರಿಯಾಯಿತಿ ಪಡೆಯಬಹುದಾಗಿದೆ. ಗ್ರಾಹಕರು ಯಾವುದೇ ತಮ್ಮ ಹಳೆಯ 916 ಹಾಲ್ ಮಾರ್ಕ್‌ ಚಿನ್ನಾಭರಣಗಳ ವಿನಿಮಯಕ್ಕೆ ಶೇ.100 ಬೆಲೆಯನ್ನು ಪಡೆಯುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ.

Related posts

ಕಳೆಂಜ: ಆರ್ವಿ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಶಿಬರಾಜೆ ಅಂಗನವಾಡಿ ಮಕ್ಕಳಿಗೆ ಕುರ್ಚಿ ಕೊಡುಗೆ

Suddi Udaya

ನ್ಯಾಯವಾದಿ ಮೇಲೆ ದಾಳಿ: ಹಿಂದೂ ಜನಜಾಗೃತಿ ಸಮಿತಿಯಿಂದ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ವಸ್ತುಪ್ರದರ್ಶನ ಮೇಳದಲ್ಲಿ ಮಾಂಡೋವಿ ಮೋಟಾರ್ಸ್ ಪ್ರೈ ಲಿ.ಸಂಸ್ಥೆ ಭಾಗಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಪ್ರಥಮ‌ ಗ್ರಾಹಕರಿಗೆ ಕಾರು ಹಸ್ತಾಂತರ

Suddi Udaya

ಹಿಂದೂ ಸಂಗಮ ಆಯೋಜನಾ ಸಮಿತಿ ಬಳಂಜ ಮಂಡಲದಿಂದ “ಹಿಂದೂ ಸಂಗಮ” ಕಾರ್ಯಕ್ರಮ

Suddi Udaya

ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಬೆಳ್ತಂಗಡಿ ಇದರ ನೂತನ ಕಛೇರಿ ಉದ್ಘಾಟನಾ ಸಮಾರಂಭ

Suddi Udaya

ಬೆಳ್ತಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಗುಡ್ಡ ಕುಸಿತ

Suddi Udaya
error: Content is protected !!