24.7 C
ಪುತ್ತೂರು, ಬೆಳ್ತಂಗಡಿ
September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ಬದಿನಡೆ ಕ್ಷೇತ್ರದಲ್ಲಿ ಬ್ರಹ್ಮಕಲಶ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ: ಶಾಸಕ ಹರೀಶ್ ಪೂಂಜಾ ಭೇಟಿ

ಬಳಂಜ: ಬಳಂಜ ಗ್ರಾಮದ ಬದಿನಡೆ ಶ್ರೀ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಬ್ರಹ್ಮಕಲಶದ ಪೂರ್ವಾಭಾವಿಯಾಗಿ ವಿವಿಧ ಪ್ರಾಯಚ್ಚಿತ ಹೋಮಗಳು, ಆಶ್ಲೇಷಬಲಿ, ನಾಗ ದೇವರಿಗೆ ತಂಬಿಲ, ಬ್ರಹ್ಮಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ಪರಿವಾರ ದೈವ ದೇವರುಗಳಿಗೆ ವಿಶೇಷ ಪೂಜೆಯು ಕ್ಷೇತ್ರದ ತಂತ್ರಿಗಳಾದ ಬಾಲಕೃಷ್ಣ ಪಾಂಗಣ್ಣಾಯರ ವೈದಿಕ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.

ಪಂಚಶ್ರೀ ಕುಣಿತ ಭಜನಾ ಮಂಡಳಿ ನಾಲ್ಕೂರು ಸೇರಿದಂತೆ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ ನಡೆಯಿತು. ಇದಕ್ಕಿಂತ ಮುಂಚೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ರವರು ಬದಿನಡೆ ಕ್ಷೇತ್ರದಲ್ಲಿ ನಡೆಯುವ ಬ್ರಹ್ಮ ಕಲಶೋತ್ಸವದ ಸಂದರ್ಭದಲ್ಲಿ ಅಗಬೇಕಾಗಿರುವ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈಗಾಗಲೇ ಈ ದೇವಸ್ಥಾನದ ಸಂಪರ್ಕ ರಸ್ತೆಗೆ ಅಟ್ಲಾಜೆಯಿಂದ ಕಾಂಕ್ರೀಟಿಕರಣ ಮಾಡಲು 50 ಲಕ್ಷ ಅನುದಾನ ಬಿಡುಗಡೆ ಆಗಿದ್ದು ಶೀಘ್ರದಲ್ಲೇ ಕೆಲಸ ಆರಂಭಗೊಳ್ಳುತ್ತದೆ ಎಂದು ತಿಳಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಧುಕರ ಸುವರ್ಣ, ಶೇಖ‌ರ್ ಶೆಟ್ಟಿ ಕರಂಬಿತ್ತಿಲ್, ಗಣೇಶ ದೇವಾಡಿಗ ಸಂಭ್ರಮ, ಪ್ರಕಾಶ್ ವೇಣೂರು, ಸತೀಶ್ ಬಿ.ಕೆ.,ಭಾಸ್ಕರ್ ಸಾಲಿಯಾನ್ ಶಿರ್ಲಾಲ್,ಸಂತೋಷ್ ಕಾಪಿನಡ್ಕ, ಸದಾನಂದ ಸಾಲಿಯಾನ್ ಬಳಂಜ, ಸುರೇಶ್ ಶೆಟ್ಟಿ ಕುರಲ್ಯ, ಭಾಸ್ಕರ್ ಶೆಟ್ಟಿ ಕಾರ್ಯನ, ಸತೀಶ್ ಪೂಜಾರಿ ಮುಂತಾದ ಗಣ್ಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರದ ಧರ್ಮದರ್ಶಿಗಳಾದ ಜಯ ಸಾಲಿಯಾನ್ ಎಲ್ಲರನ್ನೂ ಸ್ವಾಗತಿಸಿದರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಜಿನಾಭಜನಾ ಸ್ಪರ್ಧೆಗೆ ಆಯ್ಕೆ

Suddi Udaya

ಅಗಲಿದ ಹಿರಿಯ ಸಾಹಿತಿ ಕೆ. ಟಿ. ಗಟ್ಟಿಯವರಿಗೆ ಉಜಿರೆಯಲ್ಲಿ ಶ್ರದ್ಧಾಂಜಲಿ

Suddi Udaya

ನಿಡ್ಲೆಯ ಪ್ರತಿಷ್ಠಿತ ಸಂಸ್ಥೆ ಅಗ್ರಿಲೀಫ್ ಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ

Suddi Udaya

ಮುಂಡಾಜೆ ಪ್ರಾ.ಕೃ.ಪ. ಸ. ಸಂಘದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ 145ನೇ ಜನ್ಮದಿನ ಆಚರಣೆ

Suddi Udaya

ಬಳಂಜ ವಾಲಿಬಾಲ್ ಕ್ಲಬ್ ಸೀಸನ್-5 ವಾಲಿಬಾಲ್ ಪಂದ್ಯಾಟ ಯಶಸ್ವಿಯಾಗಿ ಸಂಪನ್ನ.

Suddi Udaya

ಬೆಳ್ತಂಗಡಿ: ವಿನು ಬಳಂಜ ನಿದೇ೯ಶನದ “ಬೇರ” ಚಲನಚಿತ್ರ ಬಿಡುಗಡೆ

Suddi Udaya
error: Content is protected !!