September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ತೀರಾ ಹದಗೆಟ್ಟ ಮಚ್ಚಿನ ಪುರುಷರ ಮಜಲು ಕಲಾಯಿ ರಸ್ತೆ : ಶಾಲಾ ಮಕ್ಕಳ ಪರದಾಟ; ದುರಸ್ತಿಗೆ ಸ್ಥಳೀಯರ ಒತ್ತಾಯ

ಮಚ್ಚಿನ : ಇಲ್ಲಿಯ ಪುರುಷರ ಮಜಲು ಕಲಾಯಿ ರಸ್ತೆಯು ತೀರಾ ಹದಗೆಟಿದ್ದು ನಡೆದಾಡಲು ಸಾಧ್ಯವಾಗದಂತೆಯಾಗಿದೆ. ನಿತ್ಯ ಶಾಲೆಗೆ ತೆರಳುವ ಈ ಮಕ್ಕಳು ಕೆಸರಿನಲ್ಲಿ ಹೊರಳಾಡಿಕೊಂಡು ಶಾಲೆಗೆ ತೆರಳುವ ಸ್ಥಿತಿ ನಿರ್ಮಾಣಗೊಂಡಿದೆ.

ಈ ರಸ್ತೆಗೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿಯನ್ನು ನೀಡಿದರು ಯಾವುದೇ ಸ್ಪಂದನೆ ನೀಡದಿರುವುದು ಸ್ಥಳೀಯ ಜನರಿಗೆ ಅಕ್ರೋಶಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಎಸ್ ಟಿ ಹಾಗೂ ಇತರ ವರ್ಗದ ಸುಮಾರು ಮನೆಗಳಿದ್ದರು ಒಂದು ಕಿಲೋ ಮೀಟರ್ ರಸ್ತೆ ಮಾತ್ರ ದುರಸ್ತೆಯ ಯೋಗ್ಯವೆ ಇಲ್ಲ ಸ್ಥಳೀಯರಿಗೆ ಆರೋಗ್ಯದ ಸಮಸ್ಯೆ ಬಂದಾಗ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ತೆರಳುವ ಸ್ಥಿತಿ ನಿರ್ಮಾಣಗೊಂಡಿದೆ. ಸ್ಥಳೀಯರು ಒಟ್ಟು ಸೇರಿ ಸುಮಾರು ಐವತ್ತು ಸಾವಿರದವರೆಗೂ ಮೋರಿ ಕೆಲಸಗಳನ್ನು ತಾವೆ ಮಾಡಿಸಿದರು. ಆದರೆ ಜನಪ್ರತಿನಿಧಿಗಳ ಭರವಸೆ ಒಂದೇ ನಮಗೆ ವರದಾನವಾಗಿದೆ ಎನ್ನುತ್ತಾರೆ. ಸ್ಥಳೀಯರು ಜನಪ್ರತಿನಿಧಿಗಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ ಮಕ್ಕಳ ಮೇಲೆ ಕರುಣೆ ತೋರಿಯಾದರೂ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆಯನ್ನು ಮಾಡುವಂತೆ ಸ್ಥಳೀಯರು ಒತ್ತಾಯಸಿದ್ದಾರೆ.
✍️ ಹರ್ಷ ಬಳ್ಳಮಂಜ

Related posts

ಉಜಿರೆ: ಹಳೇಪೇಟೆ ಮುಹಿಯುದ್ದೀನ್ ಜುಮಾ ಮಸ್ಜಿದ್‌ನಲ್ಲಿ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆ

Suddi Udaya

ಸಂತ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ವಿಶೇಷ ಗ್ರಾಮ ಸಭೆ

Suddi Udaya

ಮಾ.19-26: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ಶ್ರೀ ದುರ್ಗಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘಕ್ಕೆ ರೂ.ಒಂದು ಲಕ್ಷ ದೇಣಿಗೆ

Suddi Udaya
error: Content is protected !!