30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬದನಾಜೆ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ನ ಸಹಯೋಗದೊಂದಿಗೆ ಸರಕಾರಿ ಪ್ರೌಢ ಶಾಲೆ ಬದನಾಜೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು,

ಜ್ಯೋತಿ ಪ್ರಜ್ವಲನ ಮಾಡಿ ಕಾರ್ಯ ಕ್ರಮ ವನ್ನುಉದ್ಘಾಟಿಸಿ ದ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ರೋ ಶ್ರೀಧರ್ ಕೆ. ವಿ, ಇವರು ,ವಿಧ್ಯಾರ್ಥಿಗಳು ದುಶ್ಚಟದಿಂದ ದೂರ ಇದ್ದು,ಕಲಿಕೆಯ ಕಡೆಗೆ ಗಮನ ಹರಿಸಬೇಕು, ವಿಧ್ಯಾರ್ಥಿ ಜೀವನ ಅಮೂಲ್ಯವಾದುದು, ಈ ಸಂದರ್ಭದಲ್ಲಿ ದೂರ ದೃಷ್ಟಿಯ ಗುರಿಯನ್ನು ಇಟ್ಟುಕೊಂಡು , ಶ್ರದ್ಧೆ, ಮತ್ತು ಏಕಾಗ್ರತೆಯಿಂದ, ನಿರಂತರ ಅಧ್ಯಯನ ಶೀಲರಾಗಬೇಕು, ಈ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಅನೇಕ ಅವಕಾಶಗಳು ಇವೆ, ಆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ಜೀವನದಲ್ಲಿ ಸಾಧನೆ ಮಾಡಿ, ಶಾಲೆಗೂ, ಹೆತ್ತವರಿಗೂ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು,

ಸಂಪನ್ಮೂಲ ವ್ಯಕ್ತಿ ರೋ, ಬಿ. ಸೋಮಶೇಖರ ಶೆಟ್ಟಿಯವರು,ದುಶ್ಚಟಗಳ ವಿರುದ್ಧ ಜಾಗೃತಿ, ಸದಾಚಾರಗಳ ಬಗ್ಗೆ ಅರಿವು ಮೂಡಿಸುತ್ತಾ,ಮಾದಕ ದ್ರವ್ಯಗಳ ಸೇವನೆಯ ದುಷ್ಪರಿಣಾಮ, ಆದರ್ಶ ವಿದ್ಯಾರ್ಥಿಗಳಲ್ಲಿ ಇರಬೇಕಾದ ಗುಣ ನಡತೆಗಳು, ಮಾನವೀಯ ಮೌಲ್ಯ, ಭಾರತೀಯ ಪರಂಪರೆಯ ಬಗ್ಗೆ, ಮತ್ತು ಜೀವನ ಮೌಲ್ಯ ಗಳಿಗೆ ಸಂಬಂಧಿಸಿದ ಅನೇಕ ಕತೆಗಳ ಮೂಲಕ, ವಿವರಿಸಿ, ಆದರ್ಶ ವಿದ್ಯಾರ್ಥಿಯಾಗಿ, ದೇಶದ ಸತ್ಪ್ರಜೆಯಾಗಿ ಬಾಳುವಂತೆ ಮಾರ್ಗದರ್ಶನ ನೀಡಿದರು.

ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಮುನಾ ಮಾತನಾಡಿ ರೋಟರಿ ಸಂಸ್ಥೆಯ ವತಿಯಿಂದ ಜರುಗಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯ ಕ್ರಮ, ವಿಧ್ಯಾರ್ಥಿಗಳಿಗೆ ಅವಶ್ಯಕವಾಗಿದ್ದು,ವಿಧ್ಯಾರ್ಥಿಗಳಿಗೆ ಉತ್ತಮ ಮಾರ್ಗ ದರ್ಶನ ನೀಡಿದ ಬಗ್ಗೆ ರೋಟರಿ ಸಂಸ್ಥೆಯನ್ನು ಅಭಿನಂದಿಸಿದರು ಹಾಗೂ ವಿಧ್ಯಾರ್ಥಿಗಳು ಆರೋಗ್ಯ ಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕುಮಾರಿ ವರ್ಷಿತಾ ನಿರೂಪಿಸಿದ ಕಾರ್ಯ ಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷ ದಯಾಕರ ಸ್ವಾಗತಿಸಿ, ಕಾರ್ಯದರ್ಶಿ ವಂಶಿ ವಂದಿಸಿದರು, ರೋ. ವಿದ್ಯಾಕುಮಾರ್ ಕಾಂಚೋಡು, ಮತ್ತು ಶಾಲೆಯ ಸಹ ಶಿಕ್ಷಕರು ಉಪಸ್ಥಿತರಿದ್ದರು.

Related posts

ರಾಜ್ಯದ ರೈತರ, ಮಠ ಮಂದಿರಗಳ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲು ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಮಂಡಲದ ವತಿಯಿಂದ ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ

Suddi Udaya

ಮದ್ದಡ್ಕ ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya

ಗುರುವಾಯನಕೆರೆ: ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವದ ಪ್ರಯುಕ್ತ ಭಜನ್ ಸಂಧ್ಯಾ ಕಾರ್ಯಕ್ರಮ

Suddi Udaya

ದಿವ್ಯಾಂಗರ ಬಾಳಿಗೆ ಬೆಳಕಾದ ಕನ್ಯಾಡಿ ಸೇವಾ ಭಾರತಿ ಸಂಸ್ಥೆಗೆ 20 ವರ್ಷ: ನ.14 : ಸೇವಾನಿಕೇತನದಲ್ಲಿ ನೂತನ ಕಟ್ಟಡಕ್ಕೆ ಭೂಮಿಪೂಜೆ ಹಾಗೂ ಶಿಲಾನ್ಯಾಸ

Suddi Udaya

ಎಸ್.ಡಿ.ಎಂ. ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆ ವಿದ್ಯಾರ್ಥಿಗಳು ಚದುರಂಗ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!