32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

ಕೊಕ್ಕಡ : ಜೆಸಿಐ ಕೊಕ್ಕಡ ಕಪಿಲಾ ಘಟಕದ ಆಗಸ್ಟ್ ತಿಂಗಳ ಸಾಮಾನ್ಯ ಸಭೆಯು ಆ.16 ರಂದು ಕೊಕ್ಕಡದ ಎಜುನೆಸ್ಟ್ ಅಕಾಡೆಮಿ ಕೇಂದ್ರದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ರಿತೇಶ್ ಎಂ. ಸ್ಟ್ರೆಲ್ಲಾ ವಹಿಸಿದರು. ಇದೇ ತಿಂಗಳ 23 ರಂದು ಮಡಂತ್ಯಾರಿನಲ್ಲಿ ನಡೆಯುವ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರ್ಣಯಿಸಲಾಯಿತು. ರಾಷ್ಟ್ರೀಯ ಮಟ್ಟದ ಜೆಸಿಎಸ್ಎಟಿ ಪರೀಕ್ಷೆ ಯಶಸ್ವಿಗಾಗಿ ಅಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ವಲಯದ ಸಾಧನಾಶ್ರೀ ಪ್ರಶಸ್ತಿಗೆ ಉಪಾಧ್ಯಕ್ಷ ವಿಕ್ಟರ್ ಸುವಾರಿಸ್ ಅವರ ಹೆಸರು ನಾಮನಿರ್ದೇಶನ ಮಾಡಲು ನಿರ್ಧರಿಸಲಾಯಿತು.

ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ವತಿಯಿಂದ ಸೆಪ್ಟೆಂಬರ್ 6 ರಂದು ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮಕ್ಕೆ ಘಟಕದ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಆಹ್ವಾನಿಸಲಾಯಿತು. ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ಕೆ. ಶ್ರೀಧರ ರಾವ್ ಅವರು ವಾಚಿಸಿದರು. ನಿಕಟಪೂರ್ವಾಧ್ಯಕ್ಷರಾದ ಡಾ‌. ಶೋಭಾ ಪಿ., ಪೂರ್ವಾಧ್ಯಕ್ಷರಾದ ಸಂತೋಷ್ ಜೈನ್, ವಲಯ ಉಪಾಧ್ಯಕ್ಷ ಜಿತೇಶ್ ಎಲ್. ಪಿರೇರಾ, ಜೆಸಿಂತಾ ಡಿಸೋಜ, ಜೋಸೆಫ್ ಪಿರೇರಾ, ದಕ್ಷ ಜೈನ್ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಜೋಯಲ್ ಪಿರೇರಾ ವಂದಿಸಿದರು.

Related posts

ಕುದ್ರಡ್ಕ ಶ್ರೀ‌ ಮಹಾಗಣಪತಿ ಭಜನಾ ಮಂದಿರದಲ್ಲಿ ‌ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ವೃತ್ತಿಪರ ಕೌಶಲ್ಯದ ತರಬೇತಿ ಕಾರ್ಯಾಗಾರ

Suddi Udaya

ಸುಲ್ಕೇರಿ ಶ್ರೀ ರಾಮ ಪ್ರೌಢ ಶಾಲೆಯ ಪ್ರಾರಂಭೋತ್ಸವ

Suddi Udaya

ಮಲವಂತಿಗೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಉಜಿರೆಯ ಸಿದ್ಧವನದಲ್ಲಿ ಶಂಕರ ಜಯಂತಿ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಾಧನೆಗೆ ವಿಮಾ ಕ್ಷೇತ್ರದ ಗೌರವ

Suddi Udaya
error: Content is protected !!