32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆ.18: ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ

ಉಜಿರೆ: ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ “Next-Generation Academia: AI-Enabled Teaching, Research and Innovation” ವಿಷಯದ ಕುರಿತು ಐದು ದಿನಗಳ ರಾಷ್ಟ್ರೀಯ ಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ (FDP) ಆ., 18 ರಿಂದ ಆರಂಭಗೊಳ್ಳಲಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಹಾಗೂ ಮುಖ್ಯ ಭಾಷಣಕಾರರಾಗಿ ಡಾ. ಕೆ. ಸತ್ಯಮೂರ್ತಿ, ಪ್ರಾಧ್ಯಾಪಕರು ಹಾಗೂ ನಿರ್ದೇಶಕರು (ಸಂಶೋಧನೆ), ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ, ಧಾರವಾಡ, ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಡಾ. ಸತೀಶ್ಚಂದ್ರ ಎಸ್., ಕಾರ್ಯದರ್ಶಿಗಳು, ಎಸ್‌ಡಿಎಂ ಶೈಕ್ಷಣಿಕ ಸಂಸ್ಥೆಗಳ ಸಂಘ, ಉಜಿರೆ, ಉಪಸ್ಥಿತರಿರುವರು.

ಗೌರವ ಅತಿಥಿಯಾಗಿ ಪೂರನ್ ವರ್ಮಾ, ಸಿಇಒ–ಐಟಿ ಮತ್ತು ಹಾಸ್ಟೆಲ್ ಆಡಳಿತ, ಎಸ್‌ಡಿಎಂ ಶೈಕ್ಷಣಿಕ ಸಂಸ್ಥೆಗಳ ಸಂಘ, ಉಜಿರೆ, ಭಾಗವಹಿಸಲಿದ್ದಾರೆ.

ಕಾರ್ಯಕ್ರಮವು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ಮೂಲ ವಿಜ್ಞಾನ ಮತ್ತು ಗ್ರಂಥಾಲಯ ವಿಭಾಗ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಜಂಟಿಯಾಗಿ ಆಯೋಜಿಸಿವೆ.

Related posts

ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ “ಮಾಮ್” ಪ್ರಶಸ್ತಿಯ ಗರಿ

Suddi Udaya

ಗರ್ಡಾಡಿ: ಮುಗೇರಡ್ಕ ನಿವಾಸಿ ಶೀಲಾವತಿ ನಿಧನ

Suddi Udaya

ಬೆಳ್ತಂಗಡಿ: ಬೆಳೆ ವಿಮೆ ಯೋಜನೆ : ವಿಮಾ ಕಂತು ಪಾವತಿಗೆ ಆ.7ರ ತನಕ ಅವಕಾಶ

Suddi Udaya

ಸಿರಿ ಸಂಸ್ಥೆಯ 2024ನೇ ವ‍‍‍‍‍‍‍‍‍‍‍‍‍‍‍‍‍‍ರ್ಷದ ಕ್ಯಾಲೆಂಡರ್ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಭತ್ತದ ತಳಿ ಸಂರಕ್ಷಕ ದೇವರಾವ್ ಅವರಿಗೆ ಪ್ರಶಸ್ತಿ ಪ್ರದಾನ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯುಧ ಪೂಜೆ

Suddi Udaya
error: Content is protected !!