31.8 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ: ಮಾತೃ ಪೂಜನ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮ

ಬೆಳ್ತಂಗಡಿ: ಅಳದಂಗಡಿಯಲ್ಲಿ ಶ್ರೀ ನಮನ ಸಭಾಭಾವನ ಶಾಖೆಯಲ್ಲಿ 70 ದಿವಸಗಳ ಯೋಗಶಿಕ್ಷಣವು ಪೂರ್ಣಗೊಂಡು, ಮಾತೃ ಪೂಜನ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮವು ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಆ.16 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಳದಂಗಡಿಯ ಜನಪ್ರಿಯ ವೈದ್ಯರಾದ ಸುಷ್ಮಾ ಡೋಂಗ್ರೆ ರವರು ಅಮ್ಮನ ಕರ್ತವ್ಯ, ಅಮ್ಮನನ್ನು ಸಮ್ಮಾನ ಮಾಡಬೇಕಾದ ನಮ್ಮ ಕರ್ತವ್ಯಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದರು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಖೆಯ ಶಿಕ್ಷಕಿ ಗೀತಾ ಸಮಿತಿಯಲ್ಲಿ ಮಾತೃಪೂಜನ ಕಾರ್ಯಕ್ರಮವನ್ನು ಆಚರಿಸುವ ಉದ್ದೇಶವನ್ನು ತಿಳಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀಮತಿ ಶುಭಾ, ಸಂಚಾರಿ ಶಿಕ್ಷಕರು, ಪುತ್ತೂರು, ಇವರು ಸಮಿತಿಯ ಪರಿಚಯದೊಂದಿಗೆ ಅಮ್ಮನ ಪ್ರಾಮುಖ್ಯತೆಗಳನ್ನು ಮನಮುಟ್ಟುವಂತೆ ತಿಳಿಸಿದರು. ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಶಾಖೆಯ ಯೋಗಬಂಧುಗಳಾದ ಬೇಬಿ ಪಿಲ್ಯ, ಜಗದೀಶ್ , ನಾಗಭೂಷಣ್, ಪ್ರಸಾದ್ , ಗಿರೀಶ್, ಸುಜಾತ, ರಶ್ಮಿ, ಪ್ರಸನ್ನ, ಉಷಾ ಯೋಗಾಭ್ಯಾಸದಿಂದ ತಮಗಾದ ಅನುಭವಗಳನ್ನು ಹಂಚಿಕೊಂಡರು.

ನೇತ್ರಾವತಿ ವಲಯ ಸಂಯೋಜಕರಾದ ಜಯರಾಮ, ಪುತ್ತೂರು ತಾಲೂಕು ಶಿಕ್ಷಣ ಪ್ರಮುಖರಾದ ಸತೀಶ್ ಹಾಗೂ ಶ್ರೀಮತಿ ವಿನಯ ರವರು ಯೋಗಬಂಧುಗಳಿಗೆ ಆಟಗಳನ್ನು ಆಡಿಸುವ ಮೂಲಕ ಅವರನ್ನು ಹುರಿದುಂಬಿಸಿದರು.


ಅಳದಂಗಡಿಯ ಶ್ರೀ ನಮನ ಸಭಾಭವನ ಶಾಖೆಯ ಯೋಗಬಂಧುಗಳು ತಯಾರಿಸಿದ ಶುಚಿ-ರುಚಿಯಾದ ಪ್ರಸಾದವನ್ನು ಅನ್ನಪೂರ್ಣೇಶ್ವರಿ ಮಂತ್ರ ಪಠಣದ ನಂತರ ಎಲ್ಲರಿಗೂ ಕೈತುತ್ತು ನೀಡಿ ಹಂಚಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಮಾತೃಶಾಖೆಯಾದ ಬೆಳ್ತಂಗಡಿ ಶಾಖೆಯ ಯೋಗಬಂಧುಗಳು ಸಹಕಾರವನ್ನು ನೀಡಿದರು. ನಮನ ಸಭಾಭವನದ ಮಾಲಕರಾದ ಸತೀಶ್ ಉಪಸ್ಥಿತರಿದ್ದರು.

ಪುಷ್ಪಾ ಪ್ರಾರ್ಥಿಸಿ, ಮಾಲಾ ಸ್ವಾಗತಿಸಿದರು. ಶ್ರೀ ನಮನ ಸಭಾಭವನ ಶಾಖೆಯ 70 ದಿನಗಳ ವರದಿಯನ್ನು ಭಾರತಿ ಕಾಪಿನಡ್ಕ ವಾಚಿಸಿದರು. ನಿರೀಕ್ಷಾ ನಿರೂಪಿಸಿ , ಶ್ರೀಮತಿ ಹರಿಣಾಕ್ಷಿ ವಂದಿಸಿದರು.

Related posts

ಮದ್ದಡ್ಕ  : ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ರಚನೆ: ಅಧ್ಯಕ್ಷರಾಗಿ ಗೋಪಿನಾಥ್ ನಾಯಕ್

Suddi Udaya

ನಾಳೆ (ಏ.19): ವಿ.ಹಿಂ.ಪ. ಬೆಳ್ತಂಗಡಿ ಪ್ರಖಂಡದಿಂದ ಉಜಿರೆಯಲ್ಲಿ ರಾಮೋತ್ಸವ; ಚಕ್ರವರ್ತಿ ಸೂಲಿಬೆಲೆಯವರಿಂದ ಧಾರ್ಮಿಕ ಉಪನ್ಯಾಸ

Suddi Udaya

ಪ್ರತಿಭಾ ಕಾರಂಜಿ: ಸ್ಟಾರ್‌ಲೈನ್ ಆಂ.ಮಾ. ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ

Suddi Udaya

ಪಟ್ರಮೆ: ಮಿತ್ತಡ್ಕದಲ್ಲಿ ಸಂಜೀವ ಗೌಡ ರವರ ಮನೆಗೆ ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿ: ಅಪಾರ ಹಾನಿ

Suddi Udaya

ಡಿ.17: ಬೆಳ್ತಂಗಡಿ ತಾಲೂಕಿನ 18ನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಪ್ರೊ.ಎ. ಕೃಷ್ಣಪ್ಪ ಪೂಜಾರಿ ಆಯ್ಕೆ

Suddi Udaya

ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ: ನವನೀತ್ ಕೊಯ್ಯೂರು ಅವರ ತಂಡ ದ್ವಿತೀಯ ಸ್ಥಾನ

Suddi Udaya
error: Content is protected !!