32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬ್ರಹ್ಮಾವರ ವಲಯ ಹಾಗೂ ರೋಟರಿ ಕ್ಲಬ್ ವತಿಯಿಂದ ಪ್ರತಿಷ್ಠಿತ ಛಾಯಾರತ್ನ ಪ್ರಶಸ್ತಿಗೆ ಉಮೇಶ್ ಮದ್ದಡ್ಕ ಆಯ್ಕೆ

ಬೆಳ್ತಂಗಡಿ: ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬ್ರಹ್ಮಾವರ ವಲಯ ಹಾಗೂ ರೋಟರಿ ಕ್ಲಬ್ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ನೀಡಲಾಗುವ ಪ್ರತಿಷ್ಟಿತ ಛಾಯಾರತ್ನ ಪ್ರಶಸ್ತಿಗೆ ಉಮೇಶ್ ಮದ್ದಡ್ಕ ಆಯ್ಕೆಯಾಗಿದ್ದಾರೆ.

ಇವರು ಮದ್ದಡ್ಕ ಮನು ಸ್ಟುಡಿಯೋ ಮಾಲಕರು, ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್ ದ.ಕ-ಉಡುಪಿ ಜಿಲ್ಲಾ ಮಾಜಿ ಮಾಧ್ಯಮ ಪ್ರತಿನಿಧಿ, ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ಮಾಜಿ ಅಧ್ಯಕ್ಷರು, ತಾಲೂಕಿನ ಹಲವಾರು ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರು, ಪದಾಧಿಕಾರಿಗಳಾಗಿ, ತಾಲೂಕಿನ ವಾರ ಪ್ರತಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಸಂಘಟನಾ ಚತುರ, ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ.

ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಇಂದು (ಆ.18) ಸಂಜೆ ಬ್ರಹ್ಮಾವರ ರೋಟರಿ ಕ್ಲಬ್ ಭವನದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಬ್ರಹ್ಮಾವರ ವಲಯದ ರಜತ ಸಂಭ್ರಮದ ಪ್ರಯುಕ್ತ ಜರಗಲಿದೆ.

Related posts

ನಡ: ಪಣಿಕ್ಕಲ ನಿವಾಸಿ ಧರ್ಣಪ್ಪ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಸೂಳಬೆಟ್ಟು: ಡೋಂಗ್ರೆ ಕುಟುಂಬಸ್ಥರಿಂದ ಶೈಕ್ಷಣಿಕ ಪರಿಕರಗಳ ವಿತರಣೆ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತಿನಲ್ಲಿ ನಿವೃತ್ತ ಅಂಚೆ ಪಾಲಕರಾದ ವಿಶ್ವನಾಥ ಪೂಜಾರಿ ಹಾಗೂ ವಿಜಯ ರಾಜ್ ಜೈನ್ ರಿಗೆ ನಾಗರೀಕ ಸನ್ಮಾನ

Suddi Udaya

ಧರ್ಮಸ್ಥಳ : ಕೂಟದ ಕಲ್ಲು ನಿವಾಸಿ ನಿತೇಶ್ ನಿಧನ

Suddi Udaya

ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ : ಅಂತರ್ ಕಾಲೇಜು ಮತ್ತು ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಚಾಲನೆ

Suddi Udaya

ನಾವೂರು: ಮುರ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಮೀಲಾದ್ ಸ್ವಾಗತ ಸಮಿತಿ ರಚನೆ

Suddi Udaya
error: Content is protected !!