25.7 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಕಳೆಂಜದಲ್ಲಿ ಅಣಬೆ ಮತ್ತು ಮೊಟ್ಟೆ ಕೋಳಿ ಸಾಕಾಣಿಕೆ ತರಬೇತಿ

ಕಳೆಂಜ: ಜನನಿ ಮಹಿಳಾ ಸಂಜೀವಿನಿ ಒಕ್ಕೂಟ, ಕಳೆಂಜ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬೆಳ್ತಂಗಡಿ ಇವರ ಸಹಯೋಗದಲ್ಲಿ ಅಣಬೆ ಬೇಸಾಯ ಮತ್ತು ಮೊಟ್ಟೆ ಕೋಳಿ ಸಾಕಾಣಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವು ಆ.19 ರಂದು ಗ್ರಾಮ ಪಂಚಾಯತ್ ಕಳೆಂಜದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಗಣೇಶ್, ಪ್ರಗತಿಪರ ಕೃಷಿಕ ಸುಲೈಮಾನ್ ಹಾಗೂ ಪಶು ವೈದ್ಯಾಧಿಕಾರಿ ಯತೀಶ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅಣಬೆ ಬೇಸಾಯ, ಮೊಟ್ಟೆ ಕೋಳಿ ಸಾಕಾಣಿಕೆ, ನಿರ್ವಹಣೆ ಹಾಗೂ ಆದಾಯ ಗಳಿಸುವ ವಿಧಾನಗಳ ಕುರಿತು ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ರೈತರು ಹಾಗೂ ಮಹಿಳಾ ಸಂಘದ ಸದಸ್ಯರು ಭಾಗವಹಿಸಿದ್ದರು. ಭಾಗವಹಿಸಿದವರಿಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಜನನಿ ಮಹಿಳಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಸಹಕರಿಸಿದರು.

Related posts

ಧರ್ಮಸ್ಥಳ: ಶ್ರೀ. ಧ.ಮಂ. ಆಂ.ಮಾ. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Suddi Udaya

ಸಿಯೋನ್ ಆಶ್ರಮದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ಸಂತ ತೆರೇಸಾ ಪ್ರೌಢ ಶಾಲೆಗೆ ಶೇ.88.60 ಫಲಿತಾಂಶ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ 2025-26 ನೇ ಸಾಲಿನ ದಾಖಲಾತಿ ಆರಂಭ

Suddi Udaya

ಕನ್ಯಾಡಿ ಶ್ರೀಗಳಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ: ಕನ್ಯಾಡಿ ಶ್ರೀರಾಮ‌ಕ್ಷೇತ್ರದ ಅಯೋಧ್ಯೆ ಶಾಖಾಮಠ ಆಶ್ರಮ ನಿರ್ಮಾಣದ ಬಗ್ಗೆ ವಿಚಾರ ವಿಮರ್ಶೆ

Suddi Udaya
error: Content is protected !!