28.4 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಟ್ರಮೆ ಸ್ಪಂದನ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಾಸಭೆ

ಪಟ್ರಮೆ : ಸ್ಪಂದನ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ(ರಿ ) ಪಟ್ರಮೆ . ಇದರ ವಾರ್ಷಿಕ ಮಹಾಸಭೆಯನ್ನು ಶ್ರೀಮತಿ ಶ್ರುತಿ ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ನಲ್ಲಿ ಆ.19ರಂದು ನಡೆಯಿತು.

ಒಕ್ಕೂಟದ ಅಧ್ಯಕ್ಷರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು . 2025-26 ನೇ ಸಾಲಿನ ಒಕ್ಕೂಟದ ವಾರ್ಷಿಕ ವರದಿಯನ್ನು ಎಮ್.ಬಿ.ಕೆ ಜಯಾ ರವರು ಓದಿ ಅದರ ಬಗ್ಗೆ ಚರ್ಚಿಸಿ ಸಭೆಯಿಂದ ಅನುಮೋದನೆ ಪಡೆಯಲಾಯಿತು. ಲೆಕ್ಕಪರಿಶೋಧನೆ ವರದಿಯನ್ನು ಪಶು ಸಖಿ ಯಶೋದಾ ಮಂಡಿಸಿ ಸಭೆಯಿಂದ ಅನುಮೋದನೆಯನ್ನು ಪಡೆಯಲಾಯಿತು.


ನಂತರ ಸ್ತನ್ಯಪಾನ ಮತ್ತು ಮಾದಕ ವ್ಯಸನದ ಬಗ್ಗೆ ಸಂಕ್ತಿಪ್ತವಾಗಿ ಮಾಹಿತಿಯನ್ನು BRP- PRI ಯಾದ ಶ್ರೀಕಲಾ ರವರು ನೀಡಿದರು.
ನಂತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಸಂಕ್ತಿಪ್ತ ವರದಿ ನೀಡಿದ ಮೇಲೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕರಾದ ವೀಣಾಶ್ರೀರವರು ನಡೆಸಿಕೊಟ್ಟರು. ನೂತನ ಅಧ್ಯಕ್ಷರಾಗಿ ದೇವಕಿ ಹಾಗೂ ಕಾರ್ಯದರ್ಶಿ ಯಾಗಿ ಅಶ್ವಿನಿ ರವರನ್ನು ಆಯ್ಕೆ ಮಾಡಲಾಯಿತು. ಆರ್ಥಿಕ ಸಾಕ್ಷರತೆ ಸಮಲೋಚಕಿಯಾದ ಉಷಾ ಕಾಮತ್ ರವರು ಬ್ಯಾಂಕಿನಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸಂಕ್ತಿಪ್ತವಾಗಿ ಮಾಹಿತಿಯನ್ನು ನೀಡಿದರು. ನಿರ್ಗಮಿತ ಒಕ್ಕೂಟದ ಅಧ್ಯಕ್ಷರಾದ ಶ್ರುತಿ ಮತ್ತು ಕಾರ್ಯದರ್ಶಿ ವಿದ್ಯಾ ಶ್ರೀ ಹಾಗೂ ನಿರ್ಗಮಿತ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು..

ಒಕ್ಕೂಟ ದ ಸಭೆಯ ಅಧ್ಯಕ್ಷೆ ಶ್ರುತಿ ರವರು ಮಾತನಾಡಿ ಒಕ್ಕೂಟ ದ ಅಧ್ಯಕ್ಷರ ಮತ್ತು ಸದಸ್ಯರ ಜವಾಬ್ದಾರಿ ಮತ್ತು ಕರ್ತವ್ಯದ ಬಗ್ಗೆ, ಹಾಗೂ ನೂತನ ಪದಾಧಿಕಾರಿಗಳು ಒಕ್ಕೂಟವನ್ನೂ ಇನ್ನೂ ಒಳ್ಳೆಯ ರೀತಿಯಲ್ಲಿ ಮುಂದುವರಿಸುವಂತೆ,ತಿಳಿಸುತ್ತಾ ಸಂಘದ ಪ್ರತಿ ಸದಸ್ಯರ ಸಹಕಾರವನ್ನು ಬಯಸಿದರು..

ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಒಕ್ಕೂಟದ ಸಿಬ್ಬಂದಿಗಳಾದ ನಳಿನಿ, ವಿದ್ಯಾ, ಯಶೋಧ ಪ್ರಾರ್ಥಿಸಿ. LCRP ನಳಿನಿ ಸ್ವಾಗತಿಸಿ, ವಲಯ ಮೇಲ್ವಿಚಾರಕರಾದ ವೀಣಾಶ್ರೀ NRLM ಯೋಜನೆಯ ಬಗ್ಗೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಈ ಕಾರ್ಯಕ್ರಮವನ್ನು ಕೃಷಿ ಸಖಿ ಶ್ರೀಮತಿ ವಿನಂತಿನಿ ರವರು ನಿರೂಪಿಸಿ., LCRP ವಿದ್ಯಾ ರವರು ಧನ್ಯವಾದವಿತ್ತರು.

Related posts

ಬೆಳ್ತಂಗಡಿ ಒಕ್ಕಲಿಗ ಗೌಡರ ಸಂಘ ಹಾಗೂ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಿಂದ ತುoಗಪ್ಪ ಗೌಡರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಕೊಲ್ಲಿ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪದಾಧಿಕಾರಿಗಳ ಆಯ್ಕೆ

Suddi Udaya

ಗೋಳಿಯಂಗಡಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವು

Suddi Udaya

ಧರ್ಮಸ್ಥಳ: ವಿಜಯ ಕ್ರೆಡಿಟ್ ಸೊಸೈಟಿಗೆ ಡಿ. ಹರ್ಷೇಂದ್ರ ಕುಮಾರ್ ಭೇಟಿ

Suddi Udaya

ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವಂತೆ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ರಿಂದ ಸಭಾಧ್ಯಕ್ಷ ಯು ಟಿ ಖಾದರ್ ಗೆ ಮನವಿ

Suddi Udaya

ಮೌಲ್ಯ ನಾಯಕ್ ರವರಿಗೆ ಸಂಸ್ಕೃತ ಒಲಂಪಿಯಾಡ್ ನಲ್ಲಿ ಸ್ವರ್ಣಪದಕ

Suddi Udaya
error: Content is protected !!