29 C
ಪುತ್ತೂರು, ಬೆಳ್ತಂಗಡಿ
October 2, 2026
ಗ್ರಾಮಾಂತರ ಸುದ್ದಿ

ಕಥೊಲಿಕ್ ಮ‌ಹಿಳಾ ಮಂಡಳಿ ಬೆಳ್ತಂಗಡಿ ವಲಯದ ವತಿಯಿಂದ ಹಿರಿಯರ ದಿನಾಚರಣೆಯನ್ನು ದಯಾ ಸ್ಪೆಷಲ್ ಸ್ಕೂಲ್ ವಿಕಲಚೇತನ ಮಕ್ಕಳ ಜೊತೆಗೆ ಬೆಳ್ತಂಗಡಿ ಯ ಲಾೖಲ ದಲ್ಲಿರುವ ವಿಮುಕ್ತಿ ಸಂಸ್ಥೆಯಲ್ಲಿ ನಡೆಸಲಾಯಿತು

ಬೆಳ್ತಂಗಡಿ:ಕಥೊಲಿಕ್ ಮ‌ಹಿಳಾ ಮಂಡಳಿ ಬೆಳ್ತಂಗಡಿ ವಲಯದ ವತಿಯಿಂದ ಹಿರಿಯರ ದಿನಾಚರಣೆಯನ್ನು ದಯಾ ಸ್ಪೆಷಲ್ ಸ್ಕೂಲ್ ವಿಕಲಚೇತನ ಮಕ್ಕಳ ಜೊತೆಗೆ ದಿನಾಂಕ ಅ 1ರಂದು ಬೆಳ್ತಂಗಡಿ ಯ ಲಾೖಲ ದಲ್ಲಿರುವ ವಿಮುಕ್ತಿ ಸಂಸ್ಥೆಯಲ್ಲಿ ನಡೆಸಲಾಯಿತು.


ವೇದಿಕೆಯಲ್ಲಿ ಕಥೊಲಿಕ್ ಮ‌ಹಿಳಾ ಮಂಡಳಿ ನಿರ್ದೇಶಕರಾದ ವಂ.ಫಾ.ಆಬೆಲ್ ಲೋಬೊ, ದಯಾ ಸ್ಪೆಷಲ್ ಸ್ಕೂಲ್ ನ ನಿರ್ದೇಶಕರಾದ ವಂ.ಫಾ.ವಿನೋದ್ ಮಸ್ಕರೇನ್ಹಸ್,ಕಥೊಲಿಕ್ ಮ‌ಹಿಳಾ ವಲಯ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಗ್ರೇಸಿ ಲೋಬೊ, ಕಾರ್ಯದರ್ಶಿಯವರಾದ ಶ್ರೀಮತಿ ಲೀನಾ ಕ್ರಾಸ್ತ, ಹಿರಿಯ ಸದಸ್ಯರಾದ ಶ್ರೀಮತಿ ಸ್ಟೆಲ್ಲಾ ಫ್ರ್ಯಾಂಕ್ ಉಪಸ್ಥಿತರಿದ್ದರು.ವಿಮುಕ್ತಿ ನಿರ್ದೇಶಕರಾದ ವಂ.ಫಾ.ವಿನೋದ್ ರವರು ಬೈಬಲ್ ವಾಚನ ದ ಪ್ರವಚನ ನೀಡಿ, ಬೆಳ್ಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ನೀವು ಕೈಗೊಳ್ಳುವ ಸೇವಾ ಕಾರ್ಯಕ್ರಮಗಳು ಶ್ಲಾಘನೀಯ ಅದರಲ್ಲೂ ಹಿರಿಯರನ್ನು ಗೌರವಿಸಿ ಹಿರಿಯರ ದಿನಾಚರಣೆ ಆಚರಿಸಲು ನಮ್ಮ ದಯಾ ಸ್ಪೆಷಲ್ ಸ್ಕೂಲ್ ನಲ್ಲಿ ಏರ್ಪಡಿಸಿದಕ್ಕಾಗಿ ಅಭಿನಂದಿಸಿ ಕಥೊಲಿಕ್ ಮ‌ಹಿಳಾ ಮಂಡಳಿ ಗೆ ಶುಭ ಹಾರೈಸಿದರು.
ಕಥೊಲಿಕ್ ಮ‌ಹಿಳಾ ಮಂಡಳಿ ವಲಯ ನಿರ್ದೇಶಕರಾದ ವಂ.ಫಾ.ಆಬೆಲ್ ಲೋಬೊ ರವರು ಮಹಿಳೆಯರು ಸದಾ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ನೆರವೇರಿಸುತ್ತಾರೆ. ಇಂದು ಹಿರಿಯ ದಿನಾಚರಣೆ ಆಚರಿಸಲು ಒಗ್ಗೂಡಿದ ನಮ್ಮನ್ನು ಅಭಿನಂದಿಸಿ ದೇವರ ಆಶೀರ್ವಾದವನ್ನು ನಮ್ಮ ಮೇಲೆ ಬೇಡಿದರು.


ದಯಾ ಸ್ಪೆಷಲ್ ಸ್ಕೂಲ್ ನ ವಿಕಲಚೇತನ ಮಕ್ಕಳು ಹಾಗೂ ಹಿರಿಯ ಸದಸ್ಯರಾದ ಕು.ಫೆಲಿಸಿಟಾ ಮೋರಿಸ್ ಇವರು ನ್ರತ್ಯದ ಮುಖಾಂತರ ಮನರಂಜಿಸಿದರು.
ಹಿರಿಯ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನನ್ನು ವಿತರಿಸಲಾಯಿತು.


ಸುಮಾರು 50 ಹಿರಿಯ ಸದಸ್ಯರು ಮತ್ತು ವಲಯ ,ಘಟಕ ಪದಾಧಿಕಾರಿಗಳು ಭಾಗವಹಿಸಿದ್ದರು. ಶ್ರೀಮತಿ ಸ್ಟೆಲ್ಲಾ ಫ್ರ್ಯಾಂಕ್ ಉಜಿರೆ ಮತ್ತು ಶ್ರೀಮತಿ ಎಲಿಜಾ ವೇಗಸ್ ಗರ್ಡಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಘಟಕ ಹಾಗೂ ವಲಯ ಮಹಿಳಾ ಮಂಡಳಿಯ ಸದಸ್ಯರಿಂದ ಹೊರೆ ಕಾಣಿಕೆ ಹಾಗೂ ಧನಸಹಾಯ ವನ್ನು ವಿಶೇಷ ವಿಕಲಚೇತನ ಮಕ್ಕಳಿಗಾಗಿ ‌ವಿಮುಕ್ತಿ ನಿರ್ದೇಶಕ ರಿಗೆ ಹಸ್ತಾಂತರಿಸಲಾಯಿತು.
ಹಾಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ದಯಾ ಸ್ಪೆಷಲ್ ಸ್ಕೂಲ್ ಮುಖ್ಯೋಪಾಧ್ಯಾಯಿನಿ ರಾದ ಶ್ರೀಮತಿ ದಿವ್ಯಾ ಸ್ವಾಗತಿಸಿ, ವಲಯ ಮಹಿಳಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಲೀನಾ ಕ್ರಾಸ್ತ ಧನ್ಯವಾದ ವಿತ್ತರು.ಕೇಂದ್ರ ಪ್ರತಿನಿಧಿ ಯಾದ ಶ್ರೀಮತಿ ಪ್ರಮೀಳಾ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ವಿಧಾನ ಸಭಾ ಅಧ್ಯಕ್ಷ ಯು ಟಿ ಖಾದರ್ ಗೆ ಆಮಂತ್ರಣ

Suddi Udaya

ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್ ವತಿಯಿಂದ 15ನೇ ವರ್ಷದ ಶನಿಪೂಜೆ

Suddi Udaya

ಬೆಳ್ತಂಗಡಿ : ಸುದೀಪ್ ಸಾಲ್ಯಾನ್’ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಗರಿಮೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆಲಂಗಾಣ ರಾಜ್ಯದ ಸಾರಿಗೆ ಸಚಿವ ಪೊಣ್ಣಂ ಪ್ರಭಾಕರ್ ಭೇಟಿ

Suddi Udaya

ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ: ಶ್ರೀ ಭಾರತೀ ಆಂ.ಮಾ.ಪ್ರೌ. ಶಾಲೆಯ ಬಾಲಕಿಯರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಸುಲ್ಕೇರಿಮೋಗ್ರು: ಕುಸಿದ ತಡೆಗೋಡೆ ತೆರವುಗೊಳಿಸಿದ ಅಳದಂಗಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸ್ವಯಂಸೇವಕರು

Suddi Udaya
error: Content is protected !!