31.8 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬುರುಡೆ ಪ್ರಕರಣ; ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ: ಧರ್ಮಸ್ಥಳದ ಪರವಾಗಿ ಸಿ.ವಿ. ನಾಗೇಶ್ ಕೋರ್ಟ್ ನಲ್ಲಿ ವಾದ

ಬೆಳ್ತಂಗಡಿ : ಬುರುಡೆ ಪ್ರಕರಣದ 39/2025 ರಲ್ಲಿ ಧರ್ಮಸ್ಥಳದ ಪರ ವಾದ ಮಾಡಲು ಹಿರಿಯ ವಕೀಲರಾದ ಬೆಂಗಳೂರಿನ ಸಿ‌.ವಿ.ನಾಗೇಶ್ ಅವರು ಬೆಳ್ತಂಗಡಿ ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶರಾದ ರಾಮಲಿಂಗಪ್ಪ ರೆಡ್ಡಿ ಅವರ ಮುಂದೆ ಅ.3 ರಂದು 12:30 ರಿಂದ 2:10 ರ ವರೆಗೆ ಹಾಗೂ ಸಂಜೆ 3 ಗಂಟೆಯಿಂದ 3:45 ರ ವರೆಗೆ ಸುಧೀರ್ಘ ವಾದ ಮಾಡಿದ್ದಾರೆ.

ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಮತ್ತು ಚಿನ್ನಯ್ಯ ಪರ ವಕೀಲರಾದ ಚಂದನ್, ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರಾದ ವಾಸು ಪೂಜಾರಿ ಮತ್ತು ಸಿರಾಜುದ್ದೀನ್ ಹಾಗೂ ಎಸ್ಐಟಿ ಅಧಿಕಾರಿಗಳು ಕೋರ್ಟ್ ನಲ್ಲಿ ವಿಚಾರಣೆ ವೇಳೆ ಹಾಜರಿದ್ದು‌‌. ಬೆಳ್ತಂಗಡಿ ನ್ಯಾಯಾಲಯದಲ್ಲಿ ನ.7 ರಂದು ಎಸ್ಐಟಿ ಮುಂದಿನ ವಿಚಾರಣೆ ನಡೆಯಲಿದೆ.

ಈ ಮೊದಲು ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಬಳಿಕ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಯಾಗಿತ್ತು. ಈಗ ಮತ್ತೆ ಬೆಳ್ತಂಗಡಿ ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ‌‌‌‌.

ವಿಚಾರಣೆ ನಡುವೆ ಸಂಜೆ 3:10 ರ ಸುಮಾರಿಗೆ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ , ಸಹೋದರ ಮೋಹನ್ ಶೆಟ್ಟಿ , ಮನೋಜ್ ಕುಂಜರ್ಪ, ಗಣೇಶ್ ಶೆಟ್ಟಿ ತಂಡ ಕೋರ್ಟ್ ಗೆ ಆಗಮಿಸಿ ಕೋರ್ಟ್ ಒಳಗಿನ ಆವರಣದಲ್ಲಿ ಎರಡು ಸುತ್ತು ತಿರುಗಿಕೊಂಡು ವಾಪಸ್ ಹೋಗಿದ್ದಾರೆ‌.

ಬೆಂಗಳೂರು ವಕೀಲರಾದ ಸಿ.ವಿ.ನಾಗೇಶ್ ಜೊತೆಯಲ್ಲಿ ವಕೀಲರಾದ ರಾಜಶೇಖರ್ ಇಳಿಯಾರ್, ಪುತ್ತೂರಿನ ಮಹೇಶ್ ಕಜೆ,ಬೆಳ್ತಂಗಡಿಯ ಸುಬ್ರಮಣ್ಯ ಕುಮಾರ್ ಅಗರ್ತ, ರತ್ಮವರ್ಮ ಬುಣ್ಣನ್, ಸುನಿಲ್, ಪ್ರದೀಪ್, ಸಚಿನ್, ಸನತ್, ಹರೀಶ್, ಪ್ರತೀಕ್ಷಾ, ತಸ್ಯ ಭಾಗಿಯಾಗಿದ್ದರು‌.

Related posts

ನಾಳ ಗಂಪದಕೋಡಿ ನಿವಾಸಿ ಶ್ರೀಮತಿ ನಾಗರತ್ನಮ್ಮ ನಿಧನ

Suddi Udaya

ಬೆಳ್ತಂಗಡಿಗೆ ಲಗ್ಗೆ ಇಟ್ಟ ಅತ್ಯಾಧುನಿಕ ‘ಫೋರ್ಸ್ ಅರ್ಬಾನಿಯಾ’-ಐಷಾರಾಮಿ ಪ್ರಯಾಣದ ಹೊಸ ಪರ್ವ ಆರಂಭ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನರರೋಗ ಶಸ್ತ್ರಚಿಕಿತ್ಸಾ ತಜ್ಞರಿಂದ ಮೆದುಳಿನ ರಕ್ತಸ್ರಾವಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ

Suddi Udaya

ಪಡ್ಡಂದಡ್ಕ: ಶ್ರೀ ವೆಂಕಟೇಶ್ವರ ಪ್ಯೂಲ್ ಸರ್ವಿಸ್ ಶುಭಾರಂಭ

Suddi Udaya

ಮಲವಂತಿಗೆ: ದಿಡುಪೆ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪ್ರಚಂಡ ಗೆಲುವು

Suddi Udaya

ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆದ ಸ್ಥಳದ ಸ್ವಚ್ಛತೆ

Suddi Udaya
error: Content is protected !!