November 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಭಂಡಾರಿ ಮಹಾಮಂಡಲದ ‘ಬಡವರಿಗೊಂದು ಸೂರು’ ಯೋಜನೆಗೆ ಅಧಿಕೃತ ಚಾಲನೆ

ಬೆಳ್ತಂಗಡಿ: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಿನ ಹಸ್ತ ಚಾಚುವ ಸದುದ್ದೇಶದಿಂದ ಭಂಡಾರಿ ಮಹಾಮಂಡಲ ರೂಪಿಸಿರುವ ‘ಬಡವರಿಗೊಂದು ಸೂರು’ ಯೋಜನೆಗೆ ಕಾರ್ಕಳ ತಾಲೂಕಿನ ಹೊಸ್ಮಾರು ಗಂಗೆ ನೀರು ಪ್ರದೇಶದ ಭಾಸ್ಕರ್ ಭಂಡಾರಿ ಅವರ ಕುಟುಂಬದ ಮನೆಯ ನವೀಕರಣ ಕಾರ್ಯದ ಮೂಲಕ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮಣ ಕರಾವಳಿ ಮತ್ತು ಉಪಾಧ್ಯಕ್ಷ ಸುರೇಶ ಭಂಡಾರಿ ಹಿರೇಬೆಟ್ಟು ಇವರ ಮೂಲಕ ನ.15ರಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಭಂಡಾರಿ ಮಹಾಮಂಡಲದ ಉಪಾಧ್ಯಕ್ಷ ಎಚ್. ಶೇಖರ್ ಭಂಡಾರಿ,ಭಂಡಾರಿ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಭಂಡಾರಿ ಉಜಿರೆ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಸೇವಾ ಟ್ರಸ್ಟ್ ನ ಜೊತೆ ಕಾರ್ಯದರ್ಶಿಯವರಾದ ನಿತ್ಯಾನಂದ ಮಂಜಪ್ಪ ಭಂಡಾರಿ , ಸಮಾಜ ಸಂಘ ಕಾರ್ಕಳ ಇದರ ಅಧ್ಯಕ್ಷ ಕೃಷ್ಣ ಭಂಡಾರಿ, ಭಂಡಾರಿ ಮಹಾಮಂಡಲದ ನಿಕಟಪೂರ್ವ ಅಧ್ಯಕ್ಷ ಶಶಿಧರ ಭಂಡಾರಿ ಕಾರ್ಕಳ, ಭಂಡಾರಿ ಸಮಾಜ ಸಂಘ ಮೂಡಬಿದ್ರೆ ಇದರ ಅಧ್ಯಕ್ಷ ಗುರುಪ್ರಸಾದ್ ಭಂಡಾರಿ, ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷ ಪ್ರಶಾಂತ್ ಭಂಡಾರಿ ಅಂಡಿಂಜೆ, ಭಂಡಾರಿ ಸಮಾಜ ಸಂಘ ಪಡುಬಿದ್ರೆ ಇದರ ಪ್ರಮುಖರಾದ ಚಂದ್ರಹಾಸ್ ಭಂಡಾರಿ, ಇಂಜಿನಿಯರ್ ಸತೀಶ್ ಕರಿಂಜೆ ಸೇರಿದಂತೆ ಸಮಾಜದ ಹಲವು ಪ್ರಮುಖರು ಉಪಸ್ಥಿತರಿದ್ದರು.

ಕಾರ್ಕಳ, ಪಡುಬಿದ್ರಿ, ಮೂಡುಬಿದಿರೆ, ಬೆಳ್ತಂಗಡಿ ಭಂಡಾರಿ ಸಮಾಜ ಸಂಘಗಳ ಸದಸ್ಯರು ಹಾಗೂ ಭಂಡಾರಿ ಯುವ ವೇದಿಕೆ ಬೆಳ್ತಂಗಡಿಯ ಸ್ವಯಂಸೇವಕ ಬಂಧುಗಳು ಈ ಸೇವಾ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಶ್ರಮದಾನ ಮಾಡಿದರು.

Related posts

ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಮುಂಡಾಜೆ ವಿರಾಟ್ ಹಿಂದೂ ಸೇವಾ ಸಂಘ ವತಿಯಿಂದ ಸೋಮಂತಡ್ಕದಲ್ಲಿ ಪಂಜಿನ ಮೆರವಣಿಗೆ ಮತ್ತು ಪ್ರತಿಭಟನೆ

Suddi Udaya

ಸಬರಬೈಲು ಶಾಲಾ ಬಳಿ ಚರಂಡಿಯ ವ್ಯವಸ್ಥೆ ಇಲ್ಲದೆ ಮಾರ್ಗದಲ್ಲಿ ಹರಿಯುತ್ತಿರುವ ನೀರು: ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಅಗ್ರಹ

Suddi Udaya

ಗುರುವಾಯನಕೆರೆ ಯರ್ಡೂರು ನಾಗಬನದಲ್ಲಿ ನಾಗರಪಂಚಮಿ

Suddi Udaya

ವೇಣೂರು: ಆಟೋ ಚಾಲಕ ಅನಿಲ್ ಕುಮಾರ್ ನಿಧನ

Suddi Udaya

ಶಿರ್ಲಾಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ಜಂಟಿ ಸಂಘಟನೆ ವತಿಯಿಂದ ‘ಆಟಿದ ಅಟಿಲ್’ ಕಾರ್ಯಕ್ರಮ

Suddi Udaya

ಡಿ.7 ಧರ್ಮಸ್ಥಳದಲ್ಲಿ ಪದಾಧಿಕಾರಿಗಳ ಸಹಮಿಲನ ಹಾಗೂ ವ್ಯಸನ ಮುಕ್ತರ ಕುಟುಂಬೋತ್ಸವ

Suddi Udaya
error: Content is protected !!