ಅರಸಿನಮಕ್ಕಿ: ಇಲ್ಲಿನ ನವಶಕ್ತಿ ಆಟೋ ಚಾಲಕರ ಮಾಲಕರ ಸಂಘ ಹಾಗೂ ಸ್ಥಳೀಯ ಸಾರ್ವಜನಿಕರ ಸಹಯೋಗದೊಂದಿಗೆ ನ. 16ರಂದು ಬೂಡುಮುಗೇರಿನಿಂದ ಪಾಲೆಂಜದವರೆಗಿನ ಹದಗೆಟ್ಟ ರಸ್ತೆಯ ದುರಸ್ತಿ ಕಾರ್ಯವನ್ನು ಶ್ರಮದಾನದ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಈ ಜನಪರ ಕಾರ್ಯದಲ್ಲಿ ಸಂಘದ ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 30 ಮಂದಿ ಪಾಲ್ಗೊಂಡು ರಸ್ತೆ ದುರಸ್ತಿಗೆ ಕೈಜೋಡಿಸಿದರು. ರಸ್ತೆಯ ಮೇಲಿನ ಅಭಿಮಾನದಿಂದ ಆಗಮಿಸಿ ಶ್ರಮದಾನ ಮಾಡಿದ ಎಲ್ಲಾ ಸಾರ್ವಜನಿಕರಿಗೂ ಹಾಗೂ ಕಾರ್ಯಕ್ಕೆ ಆರ್ಥಿಕವಾಗಿ ಉದಾರ ನೆರವು ನೀಡಿದ ದಾನಿಗಳಿಗೂ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

“ಊರಿನ ಒಳಿತಿಗಾಗಿ ಮುಂದೆಯೂ ಇಂತಹ ಹಲವಾರು ಜನಪರ ಕಾರ್ಯಗಳನ್ನು ಒಟ್ಟಾಗಿ ಮಾಡೋಣ. ಎಲ್ಲರ ಸಹಕಾರವೇ ನಮ್ಮ ಸಂಘದ ದೊಡ್ಡ ಶಕ್ತಿ” ಎಂದು ನವಶಕ್ತಿ ಆಟೋ ಚಾಲಕರ ಮಾಲಕರ ಸಂಘ, ಅರಸಿನಮಕ್ಕಿ ಪದಾಧಿಕಾರಿಗಳು ತಿಳಿಸಿದ್ದಾರೆ.














