ಬೆಳ್ತಂಗಡಿ: ಶ್ರೀ ಬ್ರಹ್ಮ ಬೈದೆರ್ಲೆ ಗರಡಿ ಶಿರ್ಲಾಲು ಕರಂಬಾರು ನಲ್ಲಾರು ಗ್ರಾಮಗಳ ಕೊಡುವಿಕೆಯಿಂದ ನಡೆಯುವ ಬಂತ್ತಡ್ಕ ಗರಡಿಯ ವಾರ್ಷಿಕ ಜಾತ್ರಾ ಮಹೋತ್ಸವದ ನೂತನ ಜಾತ್ರಾ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಜ್ಞಾನೇಶ್ ಕುಮಾರ್ ಕಟ್ಟ ಮನೆ, ಕಾರ್ಯದರ್ಶಿಯಾಗಿ ಜಯ ಕುಮಾರ್ ಪೊಯ್ಯೇದಂಡ, ಕೋಶಾಧಿಕಾರಿಯಾಗಿ ಪ್ರಣೀತ್ ಬಾರ್ಲೊಡಿ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಗರಡಿಯ ಆಡಳಿತ ಸಮಿತಿಯ ಅಧ್ಯಕ್ಷ ರಮೇಶ್ ಶಿರ್ಲಾಲ್, ಗೌರವಾಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಉಪಾಧ್ಯಕ್ಷ ದಿವಾಕರ ಪೂಜಾರಿ ಜಾರಿಗೆದಡಿ, ಪ್ರಧಾನ ಕಾರ್ಯದರ್ಶಿಯಾದ ಹರೀಶ್ ಕಲ್ಲಾಜೆ, ಜೊತೆ ಕಾರ್ಯದರ್ಶಿ ರಮೇಶ್ ಆಚಾರೋಟ್ಟು, ಕೋಶಾಧಿಕಾರಿ ಎಂ.ಎಸ್. ರಮೇಶ್, ಆಡಳಿತ ಸಮಿತಿಯ ನಿರ್ದೇಶಕರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.














