November 18, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ: ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಬೆಳ್ತಂಗಡಿ: ಕೊಯ್ಯೂರು ದೇವಸ್ಥಾನ ಶಾಲೆಯಲ್ಲಿ ನಡೆದ 2026–27ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಶಾಲೆಗೆ ಕೀರ್ತಿ ತಂದಿದ್ದಾರೆ.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಒಟ್ಟು 7 ಪ್ರಥಮ ಸ್ಥಾನ, 8 ದ್ವಿತೀಯ ಸ್ಥಾನ ಹಾಗೂ 1 ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ದೇಶಭಕ್ತಿಗೀತೆ – ಅಂಜಲಿ (ಪ್ರಥಮ), ಆಂಗ್ಲ ಭಾಷಾ ಕಂಠಪಾಠ – ಆದ್ಯಂತ್ (ಪ್ರಥಮ), ಚಿತ್ರಕಲೆ – ಯಶ್ವಿತ್(ಪ್ರಥಮ), ಭಕ್ತಿಗೀತೆ – ಮನಸ್ವಿ (ಪ್ರಥಮ), ಪ್ರಬಂಧ ರಚನೆ – ಅಭಿಜ್ಞಾ (ಪ್ರಥಮ), ಅಭಿನಯ ಗೀತೆ – ನಿಯತಿ ಭಟ್ (ಪ್ರಥಮ), ಅಭಿನಯ ಗೀತೆ – ಅನಘಾ ಎ.ಜಿ. (ಪ್ರಥಮ), ಕನ್ನಡ ಕಂಠಪಾಠ – ಅನಘಾ ಎ.ಜಿ. (ದ್ವಿತೀಯ), ಮಣ್ಣಿನ ಮಾದರಿ ತಯಾರಿಕೆ – ಮೊಹಮ್ಮದ್ ಸಫ್ವಾನ್ (ದ್ವಿತೀಯ), ಕವನ ವಾಚನ – ಅಂಜಲಿ (ದ್ವಿತೀಯ), ಸಂಸ್ಕೃತ ಪಠಣ – ನಿಯತಿ ಭಟ್ (ದ್ವಿತೀಯ), ಆಶುಭಾಷಣ – ತನಿಯಾ ಜೈನ್ (ದ್ವಿತೀಯ), ಆಶುಭಾಷಣ – ಧಾತ್ರಿ (ದ್ವಿತೀಯ), ಹಿಂದಿ ಕಂಠಪಾಠ – ದಿಶಾ ಡಿ.ಎ. (ದ್ವಿತೀಯ), ಕಥೆ ಹೇಳುವುದು – ದಿಶಾ ಡಿ.ಎ. (ದ್ವಿತೀಯ), ಸಂಸ್ಕೃತ ಪಠಣ – ಶ್ರೀ ರಾಮ್ (ತೃತೀಯ) ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ. ಆರ್. ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿ, ಮುಂದಿನ ಹಂತಗಳಲ್ಲಿಯೂ ಇನ್ನಷ್ಟು ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದರು. ವಿದ್ಯಾರ್ಥಿಗಳ ಪ್ರತಿಭೆ, ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಶಾಲೆಗೆ ಹೆಮ್ಮೆಯ ಸಾಧನೆ ಲಭಿಸಿದೆ.

Related posts

ಬಳಂಜ: ಅಟ್ಲಾಜೆ ಕ್ರಿಕೆಟರ್ಸ್ ತಂಡದಿಂದ ಮಾನವೀಯ ಕಾರ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊರ್ವರಿಗೆ ರೂ 23 ಸಾವಿರ ಹಸ್ತಾಂತರ

Suddi Udaya

ಇಕೋಆಕ್ಷನ್ ಬಯೋ-ಡೈವರ್ಸಿಟಿ ಕ್ವಿಜ್ ಸ್ಪರ್ಧೆ: ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳು ಗ್ಲೋಬಲ್ ಮಟ್ಟದಲ್ಲಿ ದ್ವಿತೀಯ ಸ್ಥಾನ

Suddi Udaya

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆ

Suddi Udaya

ಉಜಿರೆ ಶ್ರೀ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್: ದ.ಕ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಭೇಟಿ ಪರಿಶೀಲನೆ: 241 ಮತಗಟ್ಟೆಗಳಿಗೆ ಮತ ಪೆಟ್ಟಿಗೆ ಹಾಗೂ ಪರಿಕರಗಳ ವಿತರಣೆ ಆರಂಭ

Suddi Udaya

ಬೆಳ್ತಂಗಡಿ ಯುವವಾಹಿನಿ ಮಹಿಳಾ ಸಂಚಲನಾ ಸಮಿತಿಯಿಂದ “ಮನಸು “ಅಂತರಾಳದ ಅವಲೋಕನ

Suddi Udaya

ಹ್ಯಾಂಡ್‌ಬಾಲ್‌ ಪಂದ್ಯಾಟ: ಶ್ರೀ ಧ. ಮಂ.ಅ. ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆ

Suddi Udaya
error: Content is protected !!