
ಬೆಳ್ತಂಗಡಿ: ಮಹಿಳಾ ವೃಂದ ಬೆಳ್ತಂಗಡಿ ಇದರ ಆಶ್ರಯದಲ್ಲಿ, ರಜನಿ ಎ. ಇವರ ಅಧ್ಯಕ್ಷತೆಯಲ್ಲಿ ಮಾತೃವೃಂದ ಶಿಶುಪಾಲನಾ ಕೇಂದ್ರದ ಪುಟಾಣಿಗಳೊಂದಿಗೆ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪುಟಾಣಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡು, ಮಕ್ಕಳಿಗಾಗಿ ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ವಿಶೇಷವಾಗಿ, ನೊಂದ ಹಾಗೂ ಅಸಹಾಯಕತೆಯುಳ್ಳ ವಿದ್ಯಾರ್ಥಿನಿಯರನ್ನು ಗುರುತಿಸಿ ಅವರಿಗೆ ಸಹಾಯಧನವನ್ನು ನೀಡುವುದರ ಜೊತೆಗೆ ಭಾವನಾತ್ಮಕವಾಗಿ ಸ್ಪಂದಿಸಲಾಯಿತು.

ಕಾರ್ಯಕ್ರಮದಲ್ಲಿ ವೀಣಾ ಆರ್ ಮಯ್ಯ, ಸಂಧ್ಯಾ ಪಾಲಂದೆ, ಪ್ರತಿಮಾ ಪೈ, ರಶ್ಮಿ ಪಟವರ್ಧನ್, ಉಮಾ ರಾವ್, ಸುಮತಿ ಪ್ರಮೋದ್, ಪ್ರೇಮಾ ರಮೇಶ್, ಮಮತಾ, ವನಿತಾ ತಾರಕೇಶ್ವರಿ, ಪ್ರಿಯಾ ಎಂ. ಎನ್., ಸುಚಿತ್ರಾ ಗೋಪಾಲ್, ಪ್ರಿಯಾಂಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆಶಾ ಸತೀಶ್ ಸ್ವಾಗತಿಸಿ, ನಿರೂಪಿಸಿದರು. ಲಾವಣ್ಯ ಹೊಳ್ಳ ಧನ್ಯವಾದ ಸಮರ್ಪಿಸಿದರು.














