32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಫ್ರೀಡಂ ಹಬ್ಬದಲ್ಲಿ ಪಂಚಮಿ ಮಾರೂರು ನೇತೃತ್ವದಲ್ಲಿ ಯಕ್ಷಗಾನ ಮತ್ತು ಭರತನಾಟ್ಯ ಪ್ರದರ್ಶನ

ಬೆಂಗಳೂರು: ಫ್ರೀಡಂ ಹಬ್ಬದ ಅಂಗವಾಗಿ ನಡೆದ ಫ್ರೀಡಂ ಪರೇಡ್‌ನಲ್ಲಿ ಪಂಚಮಿ ಮಾರೂರು ಅವರ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ತುಳುನಾಡಿನ ಶ್ರೀಮಂತ ಕಲಾ ಪರಂಪರೆಯನ್ನು ಅನಾವರಣಗೊಳಿಸಿತು.

ಅದರಲ್ಲೂ ವಿಶೇಷವಾಗಿ, ನಾಡಿನ ಶಕ್ತಿ ಕೇಂದ್ರವಾದ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದು ತುಳುನಾಡಿನ ಜನತೆಗೆ ಹೆಮ್ಮೆಯ ಕ್ಷಣವಾಯಿತು. ಇದೇ ಭವ್ಯ ವೇದಿಕೆಯಲ್ಲಿ ಪಂಚಮಿ ಮಾರೂರು ಅವರ ಶ್ರೀ ಪರಂಪರಾ ಹೆಜ್ಜೆಗಜ್ಜೆ ವೈ.ಪಿ. ಆರ್ಟ್ ಫೌಂಡೇಶನ್ (ರಿ.), ಬೆಂಗಳೂರು ತಂಡವು ತುಳು ಹಾಡಿಗೆ ಮನಮೋಹಕ ಭರತನಾಟ್ಯ ಪ್ರದರ್ಶನ ನೀಡಿ ಕಾರ್ಯಕ್ರಮದ ಸಾಂಸ್ಕೃತಿಕ ವೈಭವವನ್ನು ಮತ್ತಷ್ಟು ಹೆಚ್ಚಿಸಿತು.

ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಗಣ್ಯರು ಹಾಗೂ ಅಪಾರ ಸಂಖ್ಯೆಯ ಪ್ರೇಕ್ಷಕರ ಸಮ್ಮುಖದಲ್ಲಿ ಈ ಕಲಾ ಪ್ರದರ್ಶನಗಳು ನಡೆದವು. ನಾಡಿನ ಗಣ್ಯರ ಮುಂದೆ ತುಳುನಾಡಿನ ಯಕ್ಷಗಾನ ಕಲೆಯನ್ನು ಹೆಮ್ಮೆಯಿಂದ ಪ್ರಸ್ತುತಪಡಿಸಿದ ಪಂಚಮಿ ಮಾರೂರು ಮತ್ತು ತಂಡದ ಸಾಧನೆ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

ವಿಧಾನಸೌಧದ ಮುಂಭಾಗದ ಭವ್ಯ ವೇದಿಕೆಯಲ್ಲಿ ಒಂದೆಡೆ ತುಳುನಾಡಿನ ಹೆಮ್ಮೆಯ ಯಕ್ಷಗಾನ, ಮತ್ತೊಂದೆಡೆ ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯ ಭರತನಾಟ್ಯ ಪ್ರದರ್ಶನಗೊಂಡಿದ್ದು ಕಲಾಭಿಮಾನಿಗಳಿಗೆ ಮತ್ತಷ್ಟು ಸಂತಸ ತಂದಿತು. ಪಂಚಮಿ ಮಾರೂರು ಅವರ ನೇತೃತ್ವದಲ್ಲಿ ಎರಡೂ ಕಲಾ ಪ್ರಕಾರಗಳು ಪ್ರತಿಷ್ಠಿತ ವೇದಿಕೆಯಲ್ಲಿ ಪ್ರದರ್ಶನಗೊಂಡಿರುವುದು ತುಳುನಾಡಿನ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

ಈ ಪ್ರತಿಷ್ಠಿತ ಅವಕಾಶವನ್ನು ಕಲಾವಿದರಿಗೆ ಒದಗಿಸಿ, ತುಳುನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ರಾಜ್ಯಮಟ್ಟದ ಭವ್ಯ ವೇದಿಕೆಯಲ್ಲಿ ಪರಿಚಯಿಸಲು ಸಹಕರಿಸಿದ ಜೈ ತುಳುನಾಡು ಬೆಂಗಳೂರು (ರಿ.) ತಂಡ, ನಿಧೀಶ್ ಶೆಟ್ಟಿ ಹಾಗೂ ಯತೀಶ್ ಎಂ. – (ಡಿಜಿಟಲ್ ಪಿ.ಆರ್.ಓ.) ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಹಾಗೂ ಕೃತಜ್ಞತೆಗಳು.

ತುಳುನಾಡಿನ ಕಲೆ, ಸಂಸ್ಕೃತಿ ಮತ್ತು ಯಕ್ಷಗಾನದ ಹಿರಿಮೆಯನ್ನು ರಾಜ್ಯದ ರಾಜಧಾನಿಯಲ್ಲಿ ಎತ್ತಿಹಿಡಿದ ತುಳುನಾಡಿನ ಹೆಮ್ಮೆಯ ಮಗಳು ಪಂಚಮಿ ಮಾರೂರು ಅವರಿಗೆ ತುಳುನಾಡಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಸದಸ್ಯರಿಗೆ ಲೋಕಲ್ ಆರ್ಗನೈಜೇಷನ್ ಡೆವಲಪ್ಮೆಂಟ್ ತರಬೇತಿ

Suddi Udaya

ಉಜಿರೆ: ಸೌಜನ್ಯ ಪ್ರಕರಣ: ಆರೋಪಿ ಸಂತೋಷ್ ರಾವ್ ನಿರಪರಾಧಿ ಸಿಬಿಐ ನ್ಯಾಯಾಲಯ ಆದೇಶ

Suddi Udaya

ಬೈಕ್‌ಗಳ ನಡುವೆ ಭೀಕರ ಅಪಘಾತ: ಓರ್ವ ಸಾವು, ಮತ್ತೋರ್ವ ಗಂಭೀರ ಗಾಯ

Suddi Udaya

ಜೆ ಇ ಇ ಮೈನ್ಸ್ ಪರೀಕ್ಷೆ: ವಾಣಿ ಕಾಲೇಜಿನ ವಿದ್ಯಾರ್ಥಿ ಆದರ್ಶ್ ಗೆ ಶೇ. 98.08 ಫಲಿತಾಂಶ

Suddi Udaya

ಕಾಯರ್ತಡ್ಕ- ಮುದ್ದಿಗೆ ಸಂಪರ್ಕ ರಸ್ತೆಯಲ್ಲಿ ಕಾಡಾನೆಗಳ ಓಡಾಟ

Suddi Udaya

ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ (ಡಿ.ಇಎಲ್.ಇಡಿ) ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya
error: Content is protected !!