32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಾಸಕ ಹರೀಶ್ ಪೂಂಜರ ಹುಟ್ಟುಹಬ್ಬ: ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ; ಕಮಲ ಅವರ ಮನೆ ನಿರ್ಮಾಣಕ್ಕೆ ಸಾಯಿ ರಾಮ್ ಫ್ರೆಂಡ್ಸ್ ಸಂಕಲ್ಪ

ಗುರುವಾಯನಕೆರೆ: ಶಾಸಕ ಹರೀಶ್ ಪೂಂಜ ಅವರ ಹುಟ್ಟುಹಬ್ಬದ ಪ್ರಯುಕ್ತ ಸಾಯಿ ರಾಮ್ ಫ್ರೆಂಡ್ಸ್ ಶಕ್ತಿನಗರ, ಗುರುವಾಯನಕೆರೆ ವತಿಯಿಂದ ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಸಮಾಜಮುಖಿ ಕಾರ್ಯಕ್ಕೆ ಸಂಕಲ್ಪ ಮಾಡಲಾಯಿತು. ಕುವೆಟ್ಟು ಗ್ರಾಮದ ಬರಾಯ ನಿವಾಸಿ ಕಮಲ ಅವರಿಗೆ ಶಾಸಕ ಹರೀಶ್ ಪೂಂಜ ಅವರ ಸಹಕಾರದೊಂದಿಗೆ, ಸಾಯಿ ರಾಮ್ ಫ್ರೆಂಡ್ಸ್ ಹಾಗೂ ದಾನಿಗಳ ನೆರವಿನಿಂದ ಮನೆ ನಿರ್ಮಿಸಿಕೊಡುವ ಕಾರ್ಯ ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಸಾಯಿ ರಾಮ್ ಫ್ರೆಂಡ್ಸ್ ಶಕ್ತಿನಗರ ಅಧ್ಯಕ್ಷ ಪ್ರದೀಪ್ ಶೆಟ್ಟಿ ಶಕ್ತಿನಗರ, ದೇವಿಪ್ರಸಾದ್ ಆಚಾರ್ಯ ಶಕ್ತಿನಗರ, ವಿತೇಶ್ ಪಾಡ್ಯರ್, ಪ್ರದೀಪ್ ಶೆಟ್ಟಿ ನವಶಕ್ತಿ, ನಿಮಿತ್ ಪೂಜಾರಿ ಪಾಡ್ಯರ್, ಪವನ್ ಬಂಗೇರ ಬರಾಯ, ರಮೇಶ್ ಬರಾಯ ಹಾಗೂ ಸಾಯಿ ರಾಮ್ ಫ್ರೆಂಡ್ಸ್ ಶಕ್ತಿನಗರ ತಂಡದ ಸದಸ್ಯರು ಉಪಸ್ಥಿತರಿದ್ದರು.

Related posts

ಧರ್ಮಸ್ಥಳದ ಬಿ. ಪ್ರಕಾಶ ದೇವಾಡಿಗರವರು ಸ್ಯಾಕ್ಸೋಪೋನ್ ಕಾರ್ಯಕ್ರಮ ನೀಡಲು ಮೂರನೇ ಬಾರಿಗೆ ಅಮೇರಿಕಕ್ಕೆ

Suddi Udaya

ಚಾಮಾ೯ಡಿ : ಮರಳು ಸಾಗಾಟದ ಲಾರಿ ವಶ

Suddi Udaya

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’, ‘ಸಂಸ್ಕೃತ ಸಂಧ್ಯಾ’

Suddi Udaya

ಕಾಯರ್ಪಾಡಿಯಿಂದ ಕನ್ಯಾರಕೋಡಿವರೆಗೆ ಹದಗೆಟ್ಟ ರಸ್ತೆ : ದುರಸ್ತಿಗೊಳಿಸುವಂತೆ ಇಳಂತಿಲ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಅಬ್ದುಲ್ ಲತೀಷ್ ರಿಂದ ಗ್ರಾ.ಪಂ. ಗೆ ಮನವಿ

Suddi Udaya

ಗುರಿಪಳ್ಳ: ರಸ್ತೆಯ ಬದಿಯ ಚರಂಡಿಗೆ ಬಿದ್ದ ಬೈಕ್

Suddi Udaya

ಕುತ್ಲೂರು : ಬಿಜೆಪಿಯಿಂದ ಮನೆ‌ ಮನೆ ಭೇಟಿ ಕಾರ್ಯಕ್ರಮ

Suddi Udaya
error: Content is protected !!