ಬೆಳ್ತಂಗಡಿ:ಕಥೊಲಿಕ್ ಮಹಿಳಾ ಮಂಡಳಿ ಬೆಳ್ತಂಗಡಿ ವಲಯದ ವತಿಯಿಂದ ಹಿರಿಯರ ದಿನಾಚರಣೆಯನ್ನು ದಯಾ ಸ್ಪೆಷಲ್ ಸ್ಕೂಲ್ ವಿಕಲಚೇತನ ಮಕ್ಕಳ ಜೊತೆಗೆ ದಿನಾಂಕ ಅ 1ರಂದು ಬೆಳ್ತಂಗಡಿ ಯ ಲಾೖಲ ದಲ್ಲಿರುವ ವಿಮುಕ್ತಿ ಸಂಸ್ಥೆಯಲ್ಲಿ ನಡೆಸಲಾಯಿತು.

ವೇದಿಕೆಯಲ್ಲಿ ಕಥೊಲಿಕ್ ಮಹಿಳಾ ಮಂಡಳಿ ನಿರ್ದೇಶಕರಾದ ವಂ.ಫಾ.ಆಬೆಲ್ ಲೋಬೊ, ದಯಾ ಸ್ಪೆಷಲ್ ಸ್ಕೂಲ್ ನ ನಿರ್ದೇಶಕರಾದ ವಂ.ಫಾ.ವಿನೋದ್ ಮಸ್ಕರೇನ್ಹಸ್,ಕಥೊಲಿಕ್ ಮಹಿಳಾ ವಲಯ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಗ್ರೇಸಿ ಲೋಬೊ, ಕಾರ್ಯದರ್ಶಿಯವರಾದ ಶ್ರೀಮತಿ ಲೀನಾ ಕ್ರಾಸ್ತ, ಹಿರಿಯ ಸದಸ್ಯರಾದ ಶ್ರೀಮತಿ ಸ್ಟೆಲ್ಲಾ ಫ್ರ್ಯಾಂಕ್ ಉಪಸ್ಥಿತರಿದ್ದರು.ವಿಮುಕ್ತಿ ನಿರ್ದೇಶಕರಾದ ವಂ.ಫಾ.ವಿನೋದ್ ರವರು ಬೈಬಲ್ ವಾಚನ ದ ಪ್ರವಚನ ನೀಡಿ, ಬೆಳ್ಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ನೀವು ಕೈಗೊಳ್ಳುವ ಸೇವಾ ಕಾರ್ಯಕ್ರಮಗಳು ಶ್ಲಾಘನೀಯ ಅದರಲ್ಲೂ ಹಿರಿಯರನ್ನು ಗೌರವಿಸಿ ಹಿರಿಯರ ದಿನಾಚರಣೆ ಆಚರಿಸಲು ನಮ್ಮ ದಯಾ ಸ್ಪೆಷಲ್ ಸ್ಕೂಲ್ ನಲ್ಲಿ ಏರ್ಪಡಿಸಿದಕ್ಕಾಗಿ ಅಭಿನಂದಿಸಿ ಕಥೊಲಿಕ್ ಮಹಿಳಾ ಮಂಡಳಿ ಗೆ ಶುಭ ಹಾರೈಸಿದರು.
ಕಥೊಲಿಕ್ ಮಹಿಳಾ ಮಂಡಳಿ ವಲಯ ನಿರ್ದೇಶಕರಾದ ವಂ.ಫಾ.ಆಬೆಲ್ ಲೋಬೊ ರವರು ಮಹಿಳೆಯರು ಸದಾ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ನೆರವೇರಿಸುತ್ತಾರೆ. ಇಂದು ಹಿರಿಯ ದಿನಾಚರಣೆ ಆಚರಿಸಲು ಒಗ್ಗೂಡಿದ ನಮ್ಮನ್ನು ಅಭಿನಂದಿಸಿ ದೇವರ ಆಶೀರ್ವಾದವನ್ನು ನಮ್ಮ ಮೇಲೆ ಬೇಡಿದರು.

ದಯಾ ಸ್ಪೆಷಲ್ ಸ್ಕೂಲ್ ನ ವಿಕಲಚೇತನ ಮಕ್ಕಳು ಹಾಗೂ ಹಿರಿಯ ಸದಸ್ಯರಾದ ಕು.ಫೆಲಿಸಿಟಾ ಮೋರಿಸ್ ಇವರು ನ್ರತ್ಯದ ಮುಖಾಂತರ ಮನರಂಜಿಸಿದರು.
ಹಿರಿಯ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನನ್ನು ವಿತರಿಸಲಾಯಿತು.

ಸುಮಾರು 50 ಹಿರಿಯ ಸದಸ್ಯರು ಮತ್ತು ವಲಯ ,ಘಟಕ ಪದಾಧಿಕಾರಿಗಳು ಭಾಗವಹಿಸಿದ್ದರು. ಶ್ರೀಮತಿ ಸ್ಟೆಲ್ಲಾ ಫ್ರ್ಯಾಂಕ್ ಉಜಿರೆ ಮತ್ತು ಶ್ರೀಮತಿ ಎಲಿಜಾ ವೇಗಸ್ ಗರ್ಡಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಘಟಕ ಹಾಗೂ ವಲಯ ಮಹಿಳಾ ಮಂಡಳಿಯ ಸದಸ್ಯರಿಂದ ಹೊರೆ ಕಾಣಿಕೆ ಹಾಗೂ ಧನಸಹಾಯ ವನ್ನು ವಿಶೇಷ ವಿಕಲಚೇತನ ಮಕ್ಕಳಿಗಾಗಿ ವಿಮುಕ್ತಿ ನಿರ್ದೇಶಕ ರಿಗೆ ಹಸ್ತಾಂತರಿಸಲಾಯಿತು.
ಹಾಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ದಯಾ ಸ್ಪೆಷಲ್ ಸ್ಕೂಲ್ ಮುಖ್ಯೋಪಾಧ್ಯಾಯಿನಿ ರಾದ ಶ್ರೀಮತಿ ದಿವ್ಯಾ ಸ್ವಾಗತಿಸಿ, ವಲಯ ಮಹಿಳಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಲೀನಾ ಕ್ರಾಸ್ತ ಧನ್ಯವಾದ ವಿತ್ತರು.ಕೇಂದ್ರ ಪ್ರತಿನಿಧಿ ಯಾದ ಶ್ರೀಮತಿ ಪ್ರಮೀಳಾ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.













