29 C
ಪುತ್ತೂರು, ಬೆಳ್ತಂಗಡಿ
October 2, 2026
ಜಿಲ್ಲಾ ಸುದ್ದಿ

ಇಲಾಖೆಗಳು ಒಂದಾಗಿ ಕಾರ್ಯನಿರ್ವಹಿಸಿ ಸುಧಾರಣೆ ತರಬೇಕು :- ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಾನ್ಯ ಜಯಲಕ್ಷ್ಮಿ ರಾಯಕೋಡ,

ಧರ್ಮಸ್ಥಳ: ಅಕ್ಟೋಬರ್ 02 ರಂದು ಧರ್ಮಸ್ಥಳ ಗ್ರಾಮ ಪಂಚಾಯಿತಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಜನರ ಯೋಜನೆ ಅಭಿಯಾನ ಗ್ರಾಮಸಭೆ ಹಾಗೂ ಮಹಾತ್ಮ ಗಾಂಧಿ ಸುಧಾರಣೋತ್ಸವ ಕಾರ್ಯಕ್ರಮ ಮತ್ತು ‘ಸ್ವಚ್ಛತಾ ಹೀ ಸೇವಾ’ ಅಭಿಯಾನದ ಸಮಾರೋಪ ಸಮಾರಂಭವನ್ನು ಧರ್ಮಸ್ಥಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀ ನಾಗೇಶ್ ಎಂ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸದ್ರಿ ಸಭೆಯಲ್ಲಿ ಗೌರವ ಉಪಸ್ಥಿತರಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಗೂ ಮಹಾತ್ಮ ಗಾಂಧಿ ಸುಧಾರಣೋತ್ಸವ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಮಾನ್ಯ ಶ್ರೀ ಜಯಲಕ್ಷ್ಮಿ ರಾಯಕೋಡ ಮಾತನಾಡಿ ಮಹಾತ್ಮ ಗಾಂಧಿ ಸುಧಾರಣಾ ಉತ್ಸವವನ್ನು ಆಯೋಜಿಸುವ ಸಂಬಂಧ ಗ್ರಾಮೀಣಾಭಿವೃದ್ಧಿ, ಕೃಷಿ ಪಂಚಾಯತ್ ರಾಜ್, ಕುಡಿಯುವ ನೀರು, ಕಂದಾಯ, ಶಿಕ್ಷಣ, ಆರೋಗ್ಯ, ಮುಂತಾದ ವಿವಿಧ ಇಲಾಖೆಗಳು ಒಂದಾಗಿ ಕಾರ್ಯನಿರ್ವಹಿ, ಪಂಚಾಯತ್ ರಾಜ್ ಅಭಿವೃದ್ಧಿ ಯೋಜನೆಗಳನ್ನು, ಜನರಿಗೆ ಸರ್ಕಾರಿ ಸೇವೆಗಳು ಸುಲಭವಾಗಿ ಲಭ್ಯವಾಗಲೆಂದು, ಹಲವು ಪ್ರಮುಖ ಸುಧಾರಣೆಗಳು ಮತ್ತು ಕಾರ್ಯಕ್ರಮಗಳನ್ನು, ಲಭ್ಯವಾಗುವ ಸೇವೆಗಳು, ಸವಲತ್ತುಗಳು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಸಭೆಯಲ್ಲಿ ತಿಳಿಸಿದರು.


ಕಾರ್ಯಕ್ರಮದ ಅಂಗವಾಗಿ ವಿಶೇಷ ಗ್ರಾಮ ಸಭೆಯನ್ನು ನಡೆಸಿ, ಜಿಪಿಡಿಪಿ ಯೋಜನೆಯ ಕುರಿತು ಸಭೆಗೆ ಸಮಗ್ರ ಮಾಹಿತಿ ಹಾಗೂ ‘ನಮ್ಮ ಗ್ರಾಮ-ನಮ್ಮ ಯೋಜನೆ’ಯ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಧರ್ಮಸ್ಥಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ನಾಗೇಶ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಚ್ಛತೆ, ಆರೋಗ್ಯ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಕುರಿತು ಸಾರ್ವಜನಿಕರಿಗೆ ವಿವರವಾದ ಮಾಹಿತಿ ನೀಡಿದರು. ಸ್ವಚ್ಛ ಸಂಕೀರ್ಣ ಘಟಕದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗಳಿಗೆ ಗೌರವಿಸಲಾಯಿತು. ಆಹಾರ ಕಿಟ್ ಹಾಗೂ ಸಮವಸ್ತ್ರವನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ, ಧರ್ಮಸ್ಥಳದ ಕನ್ಯಾಡಿ-2ರ ದೀಪಿಕಾ ಕಂಫರ್ಟ್ಸ್ ಕಟ್ಟಡ ಮಾಲೀಕರು ಶ್ರೀಮತಿ ದೀಪಿಕಾ ರಾವ್ ರವರು ಸ್ವಚ್ಛ ಸಂಕೀರ್ಣದ ನೌಕರರಿಗೆ ಉಚಿತವಾಗಿ ಸಮವಸ್ತ್ರಗಳನ್ನು ವಿತರಿಸಿದರು. ಹಾಗೂ ಧರ್ಮಸ್ಥಳ ಕನ್ಯಾಡಿ ‘ಸುಪ್ರಜಾ’ ವಸತಿಗೃಹ ಕಟ್ಟಡ ಮಾಲೀಕರರಾದ ಶ್ರೀ ಚಂದ್ರಶೇಖರ ರಾವ್ ರವರು ಸ್ವಚ್ಛತಾ ಘಟಕದ ನೌಕರರಿಗೆ ಸ್ಟಾಂಡ್ ಪ್ಯಾನ್ ನೀಡಿ ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತರ ಸಮಾಜ ಕಾರ್ಯ ವಿದ್ಯಾರ್ಥಿಗಳು ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ವಿಶೇಷ ಸಹಕಾರವನ್ನು ನೀಡಿದರು.

ಸಭೆಯಲ್ಲಿ ಎಸ್‌.ಬಿ.ಎಂ. ಜಿಲ್ಲಾ ಪಂಚಾಯತ್ ಸಂಯೋಜಕರಾದ ಶ್ರೀ ಪವನ್ ಶೆಟ್ಟಿ, ತಾಲೂಕು ಪಂಚಾಯತ್ ಎಸ್. ಬಿ. ಎಂ ವಿಷಯ ನಿರ್ವಾಹಕರಾದ ಶ್ರೀಮತಿ ಪ್ರಿಯಾ ಹೆಗ್ಡೆ, ತಾಲೂಕು ಪಂಚಾಯತ್ ವಿಷಯನಿರ್ವಾಹಕರಾದ ಶ್ರೀ ಮಂಜು, ಸಂಜೀವಿನಿ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮೀ, ದೀಪಿಕಾ ಕಂಫರ್ಟ್ಸ್ ವ್ಯವಸ್ಥಾಪಕರಾದ ಶ್ರೀ ಯತೀಶ ರೈ, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ವಾಲ್ಮೀಕಿ ಆಶ್ರಮ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು, ಸಂಜೀವಿನಿ ಒಕ್ಕೂಟದ ಸದಸ್ಯರು, ಎಸ್ ಡಿ ಎಂ ಉಜಿರೆ ಸಮಾಜಶಾಸ್ತ್ರದ ವಿದ್ಯಾರ್ಥಿಗಳು, ಗ್ರಂಥಾಲಯ ಅರಿವು ಕೇಂದ್ರದ ಮೇಲ್ವಿಚಾರಕರು ಉಪಸ್ಥಿತರಿದ್ದರು, ಗ್ರಾಮದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಸಿಬ್ಬಂದಿ ಶ್ರೀಮತಿ ವಂದನ ಬಲ್ಲಾಳ್ ಧನ್ಯವಾದ ಸಲ್ಲಿಸಿದರು. ಡಾ. ದೇವಿಪ್ರಸಾದ್ ಬೊಲ್ಮ ಕಾರ್ಯಕ್ರಮ ನಿರೂಪಿಸಿದರು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಶುಭಾಶಯ ಕೋರುತ್ತ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Related posts

ಒಡಿಶಾದ ರೈಲು ದುರಂತದಲ್ಲಿ ಪಾರಾದ ವೇಣೂರಿನ ಪ್ರಯಾಣಿಕರು

Suddi Udaya

ಹೊಸ ವಿದ್ಯುತ್ ಸಂಪರ್ಕಗಳಿಗೆ ಇನ್ನು ಬರಲಿದೆ..ಸ್ಮಾರ್ಟ್ ಮೀಟರ್: ಮೊಬೈಲ್ ಮೂಲಕ ಪ್ರೀ ಪೇಯ್ಡ್ ಪೋಸ್ಟ್ ಪೇಯ್ಡ್ ಸೌಲಭ್ಯ

Suddi Udaya

ಉದ್ಯೋಗ ಖಾತರಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಬಂದಾರು ಗ್ರಾ.ಪಂ.ಕ್ಕೆ ಗೌರವ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ವಿರುದ್ಧ ಕೇಸು ದಾಖಲು: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡನೆ

Suddi Udaya

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರಿಗೆ ಮೊಹರೆ ಹನುಮಂತರಾಯ ಪ್ರಶಸ್ತಿ

Suddi Udaya

ಎಸ್.ಡಿ.ಎಂ. ನೆನಪಿನಂಗಳ ವಾರ್ಷಿಕ ಪುನರ್ಮಿಲನ: ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಬ್ಬರಿಗೆ ಸನ್ಮಾನ

Suddi Udaya
error: Content is protected !!