ನಡ : ನಡ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇವರ ಜನ್ಮ ದಿನದ ಅಂಗವಾಗಿ ಗಾಂಧೀ ಜಯಂತಿ ಆಚರಣೆ ಸಡಗರದಿಂದ ಆಚರಿಸಲಾಯಿತು.
ಶಾಲಾ ನಾಯಕಿ ಪುಷ್ಪಲತಾ ಹಾಗೂ ಶಿಕ್ಷಕರಾದ ಶಿವಪುತ್ರ ಸುಣಗಾರ ಆಚರಣೆಯ ಮಹತ್ವದ ಬಗ್ಗೆ ಅರ್ಥಪೂರ್ಣ ಮಾತುಗಳನಾಡಿದರು. ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ವಸಂತಗೌಡ , ಸಮಿತಿಯ ಸದಸ್ಯರಾದ ಭಾರತಿ, ಜಾನಕಿ, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು , ಪೋಷಕರು ಹಾಗೂ ವಿದ್ಯಾರ್ಥಿಗಳು ಈ ದಿನ ಶ್ರಮದಾನದ ಮೂಲಕ ಶಾಲಾ ಸ್ವಚ್ಛತೆಯನ್ನು ಕೈಗೊಂಡು ಅರ್ಥಪೂರ್ಣವಾಗಿ ಆಚರಿಸಲಾಯಿತು.













