32 C
ಪುತ್ತೂರು, ಬೆಳ್ತಂಗಡಿ
October 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಡಂಗಡಿ ಗ್ರಾ.ಪಂ. ನಲ್ಲಿ ಜಲ ಅರ್ಪಣ್ ದಿವಸ್ ಆಚರಣೆ-ನೀರು ಸರಬರಾಜು ಉದ್ಘಾಟನೆ

ಪಡಂಗಡಿ: ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಪಡಂಗಡಿಯಲ್ಲಿ ಜಲ ಅರ್ಪಣ್ ದಿವಸ್ ಆಚರಣೆ- 24×7 ನೀರು ಸರಬರಾಜು ಉದ್ಘಾಟನೆ ಕಾರ್ಯಕ್ರಮವು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಅಧ್ಯಕ್ಷತೆಯಲ್ಲಿ ಗರ್ಡಾಡಿ ಗ್ರಾಮದ ಹರೀಶ್ ಪೂಜಾರಿಯವರ ಮನೆಯಲ್ಲಿ ಜರುಗಿತು.

ಮಹಾತ್ಮ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮದಿನದಂದು ಜಲ ಅರ್ಪಣ ದಿವಸ್ ನಿರಂತರ ನೀರು ಸರಬರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕರು ಪಡಂಗಡಿ ಗ್ರಾಮ ಪಂಚಾಯಿತಿಯ ಗರ್ಡಾಡಿ ಮತ್ತು ಪಡಂಗಡಿ ಗ್ರಾಮಗಳ ನಿತ್ಯ ನಿರಂತರ ಯೋಜನೆಗೆ ಮುನ್ನುಡಿಯಾಗಿದ್ದು, ಸಮುದಾಯದ ಮಹತ್ವಕಾಂಕ್ಷಿ ಮೂಲಭೂತ ಸೌಕರ್ಯ ಅನುಷ್ಠಾನದಲ್ಲಿ ಮೈಲುಗಲ್ಲಾಗಿದ್ದು, ಜನರ ಸಹಭಾಗಿತ್ವದೊಂದಿಗೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರುಗಳು, ಮಾಜಿ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಜಯಪ್ರಕಾಶ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್, ಬೆಳ್ತಂಗಡಿ ಉಪವಿಭಾಗದ ಸಹಾಯಕ ಕಾರ್ಯ ಕಾರ್ಯಪಾಲಕ ಅಭಿಯಂತರರು ತಿರುಪತಿ ಕೆಸಿ, ಜೂನಿಯರ್ ಇಂಜಿನಿಯರ್ ದಶರಥ ವಿ ಕುಂಬಾರ, ಶರತ್ , ವಿಶ್ವ ಬ್ಯಾಂಕಿನ ಅಸ್ಮಿತ, ISA ಯ ಶಿವರಾಂ ಪಿಬಿ ಹಾಜರಿದ್ದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್ ಜಿ ಕಾರ್ಯಕ್ರಮ ಸಂಯೋಜಿಸಿದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಂಚಾಯತ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು ಸ್ವಚ್ಛತೆ, ನೀರು ಮತ್ತು ನೈರ್ಮಲ್ಯ ಸಂರಕ್ಷಣೆಯ ಬಗ್ಗೆ ಪ್ರಮಾಣ ವಚನವನ್ನು ಸ್ವೀಕರಿಸಲಾಯಿತು.

Related posts

ಮುಂಡಾಜೆ ಗ್ರಾಮ ಪಂಚಾಯತ್ ಗ್ರಾಮಸಭೆ ರದ್ದು: ಅಧಿಕಾರಿಗಳು ಗೈರು: ಧರಣಿ ಕುಳಿತ ಗ್ರಾಮಸ್ಥರು

Suddi Udaya

ನಡ ಸ.ಹಿ. ಪ್ರಾ. ಶಾಲೆಯ ಶತಮಾನೋತ್ಸವ ಸಮಿತಿ ವತಿಯಿಂದ ಉದ್ಯಮಿ ಮೋಹನ್ ಕುಮಾರ್ ರವರಿಗೆ ಗೌರವಾರ್ಪಣೆ

Suddi Udaya

ಮೈರೋಳ್ತಡ್ಕ -ಬಂದಾರು 31 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ಗುರುವಾಯನಕೆರೆ: ಶ್ರೀ ಶಿವಂ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶೇ.10-50 ವಿಶೇಷ ಆಫರ್

Suddi Udaya

ಡಾ.ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅವಹೇಳನಕಾರಿ ಪೋಸ್ಟ್‌ :ಗಿರೀಶ್ ಮಟ್ಟಣ್ಣನವರ್‌ಗೆ ಹೈಕೋರ್ಟ್‌ ತರಾಟೆ

Suddi Udaya

ನಾಪತ್ತೆಯಾಗಿದ್ದ ಕೊಯ್ಯೂರು ನಿವಾಸಿ ಮುಹಮ್ಮದ್ ಯಾಸಿರ್ ಬೆಂಗಳೂರಿನಲ್ಲಿ ಪತ್ತೆ

Suddi Udaya
error: Content is protected !!